ಕಾರವಾರ:
ಜಿಲ್ಲಾಕೇಂದ್ರ ಕಾರವಾರದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸದಂತೆ ಕೋರಿ ತಾಲ್ಲೂಕಿನ ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈಗಾಗಲೇ ರಾಜ್ಯ ವಕ್ಫ್ ಮಂಡಳಿಯ ಕಾರ್ಯನಿರ್ವಾಹಣಾಧಿಕಾರಿಯು ಜಿಲ್ಲಾಕೇಂದ್ರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸಲು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಆದರೆ ಇಲ್ಲಿರುವ ಕಚೇರಿಯು ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳಿಗೆ ಅನುಕೂಲಕರವಾಗಿದ್ದು, ಇದನ್ನು ಶಿರಸಿಗೆ ಸ್ಥಳಾಂತರಿಸಿದರೆ ಸಮಸ್ಯೆ ಉದ್ಭವವಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಇಲ್ಲಿನ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಅಥವಾ ಇನ್ನಿತರ ಯಾವುದೇ ಕಟ್ಟಡದಲ್ಲಾದರೂ ಜಿಲ್ಲಾ ವಕ್ಫ್ ಕಚೇರಿಗೆ ಜಾಗ ಕಲ್ಪಿಸಿ, ಶಿರಸಿಗೆ ಸ್ಥಳಾಂತರಿಸುವ ಆದೇಶವನ್ನು ಕೈಬಿಡಬೇಕು ಎಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಇಕ್ಬಾಲ್ ಸಲೀಂ ಸಯ್ಯದ್, ಇಮ್ತಿಯಾಜ್ ಮಕಾರಿ, ಬಾಬು ಶೇಖ್, ಇನಾಯತ್ ಶಾಪುರಿ, ಖಾಸಿಂ ಶೇಖ್, ಉಸ್ಮಾನ್ ಮುಲ್ಲಾ ಇದ್ದರು.

Leave a Comment