ಭಟ್ಕಳ:
ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ಅನೇಕರಿಗೆ ತೊಂದರೆಯಾದರೂ ಸಹ ರಾಷ್ಟ್ರೀಯ ಹಿತದೃಷ್ಟಿಯಿಂದ ಯಾವುದೇ ರೀತಿಯಿಂದ ತೊಂದರೆ ಮಾಡದೇ ನೋವನ್ನೂ ನುಂಗಿ ಜನತೆ ಸಹಕರಿಸುತ್ತಿದ್ದಾರೆ. ಜನರ ಸಹನೆಯನ್ನು ಸಹ ಪರೀಕ್ಷಿಸುವಂತಹ ಕೆಲಸ ಐ.ಆರ್.ಬಿ. ಕಂಪೆನಿ ಮಾಡುತ್ತಿರುವುದು ಕೂಡಾ ಕೆಲವೆಡೆಗಳನ್ನು ಕಂಡು ಬಂದಿದೆ.
ತಾಲೂಕಿನ ಬೆಳಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆದ್ರಕೇರಿಯ ರಮಾನಂದ ಅವಭೃತ ಅವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 5 ಗುಂಟೆ ಜಾಗಾವನ್ನು ವಶಪಡಿಸಿಕೊಂಡು ಪರಿಹಾರವನ್ನೂ ಸಹ ನೀಡಲಾಗಿತ್ತು. ತಮ್ಮ ಸ್ಥಳದಲ್ಲಿ ಪರಿಹಾರ ಪಡೆದ ಸ್ಥಳವನ್ನು ಸಹ ಬಿಟ್ಟುಕೊಟ್ಟು ಹೆದ್ದಾರಿ ಕಾಮಗಾರಿ ಸುಸೂತ್ರವಾಗಿ ನಡೆಯಲಿ ಎಂದು ಅವರೂ ಕೂಡಾ ಸಹಕರಿಸಿದ್ದರು. ಆದರೆ ಇಲ್ಲಿ ಆಗಿದ್ದೇ ಬೇರೆ ತರಹ. ಹೆದ್ದಾರಿಯ ಭೂಸ್ವಾನಾಧೀನಾಧಿಕರಿಗಳು ಭೂ ಸ್ವಾಧೀನ ಮಾಡುವಾಗ, ಪರಿಹಾರದ ವಿವರಗಳನ್ನು ನೀಡುವಾಗ, ಸಹಿ ಪಡೆಯುವಾಗ ನಿಮ್ಮ ಜಮೀನಿನಲ್ಲಿರುವ ಬಾವಿ ನಮ್ಮ ಹೆದ್ದಾರಿಗಾಗಿ ವಶಪಡಿಸಿಕೊಂಡ ಸ್ಥಳದಲ್ಲಿಲ್ಲ, ನಮಗೆ ಬಾವಿಯಿರುವ ಸ್ಥಳದ ಅವಶ್ಯಕತೆ ಇಲ್ಲ ಎಂದೇ ಹೇಳುತ್ತಾ ಬಂದಿದ್ದಾರೆ. ಈ ಹಿಂದೆ ಇವರಿಗೆ ನೀಡಿದ ಪರಿಹಾರದ ವಿವರದಲ್ಲಿಯೂ ಕೂಡಾ ಬಾವಿಯ ಕುರಿತು ಉಲ್ಲೇಖವೇ ಇಲ್ಲ. ಆದರೆ ಇಂದು ಐ.ಆರ್.ಬಿ. ಕಂಪೆನಿಯ ಜನರು ಬಂದು ನಿಮ್ಮ ಬಾವಿಯನ್ನು ಮುಚ್ಚುತ್ತೇವೆ. ನಾವು ಆಗಲೇ ಬಾವಿಯ ಪರಿಹಾರ ನೀಡಿದ್ದೇವೆ ಎನ್ನುತ್ತಿರುವುದು ಹೊಸ ಸಮಸ್ಯೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾವಿಯನ್ನು ಮಾಡಿದ್ದು ಪೈಸೆ ಪರಿಹಾರವನ್ನು ಸಹ ಬಾವಿಗೆ ನೀಡದೇ ಎಕಾ ಎಕಿ ಬಾವಿಯನ್ನು ಮುಚ್ಚುವ ಬೆದರಿಕೆಯಿಂದ ಕಂಗಾಲಾಗಿರುವ ಅವಭೃತರು ತೀವ್ರ ಚಿಂತೆಗೊಳಗಾಗಿದ್ದಾರೆ. ಪರಿಹಾರವನ್ನು ನೀಡಿದರೂ ಈ ರೀತಿಯಾಗಿ ವಿಪುಲವಾಗಿ ನೀರು ದೊರೆಯುವ ಸ್ಥಳ ತನ್ನ ಜಮೀನಿನಲ್ಲಿ ಇಲ್ಲ ಎನ್ನುವುದು ಅವರ ಚಿಂತೆಗೆ ಕಾರಣವಾಗಿದೆ.
ವಿಷೇಶ ಭೂ ಸ್ವಾಧೀನಾದಿರಿಗಳು ಭೂ ಸ್ವಾಧೀನಪಡಿಸಿಕೊಳ್ಳುವಾಗ ಇವರ ಬಾವಿಯನ್ನು ಬಿಟ್ಟಿದ್ದರೂ ಸಹ ಸಿ.ಡಿ. ನಿರ್ಮಾಣ ಮಾಡುವಾಗ ಇವರ ಬಾವಿಯ ಪಕ್ಕದಲ್ಲಿಯೇ ನಿರ್ಮಿಸಿ ಎಡವಟ್ಟು ಮಾಡಿಕೊಂಡಿರುವುದರಿಂದ ಈಗ ನಿಮ್ಮ ಬಾವಿ ಬೇಕು ಎನ್ನುತ್ತಿದ್ದಾರೆ ಎನ್ನುವುದು ಅವಭೃತರ ಆರೋಪವಾಗಿದೆ.
ಕೃಷಿಕ ಸಮಾಜದ ಉತ್ತರ ಪ್ರಾಂತ ಪ್ರಮುಖ ಶ್ರೀಧರ ಹೆಬ್ಬಾರ್, ರಮಾನಂದ ಅವಭೃತ ಸಹಾಯಕ ಕಮಿಷನರ್ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದ್ದು ಸ್ಥಳ ಪರಿಶೀಲನೆಯ ನಂತರ ನಿರ್ಧಾರಕ್ಕೆ ಬರುವುದಾಗಿ ಸಹಾಯಕ ಕಮಿಷನರ್ ಭರವಸೆ ನೀಡಿದ್ದಾರೆ. ಒಟ್ಟಾರೆ ಹೆದ್ದಾರಿಯ ಭೂ ಸ್ವಾಧೀನಾಧಿಕಾರಿಗಳು ಹೇಳುವುದೇ ಒಂದು ಐ.ಆರ್.ಬಿ. ಕಂಪೆನಿ ಮಾಡುವುದೇ ಒಂದು ಎನ್ನುವಂತಾಗಿದೆ ಪರಿಸ್ಥಿತಿ. ಒಟ್ಟಾರೆ ಜನಸಾಮಾನ್ಯನಿಗೆ ಮಾತ್ರ ತೊಂದರೆ ತಪ್ಪಿದ್ದಲ್ಲ.
ಪರಿಹಾರ: ಹೆದ್ದಾರಿ ಚತುಷ್ಪತ ಕಾಮಗಾರಿಯಿಂದ ತೊಂದರೆಗೊಳಗಾಗುತ್ತಿದ್ದ ಕುಡಿಯುವ ನೀರಿನ ಬಾವಿಯೊಂದನ್ನು ಐ.ಆರ್.ಬಿ. ಅಧಿಕಾರಿಗಳು ಖುದ್ದು ಪರಿಶೀಲಿಸಿ ತೊಂದರೆಯಾಗದಂತೆ ಜಾಗೃತೆ ವಹಿಸಿಸಲು ತಮ್ಮ ಕಿರಿಯ ಅಧಿಕಾರಿಗಳಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ಒಂದು ವರ್ಷದಿಂದ ಬೆದ್ರಕೇರಿಯ ನಿವಾಸಿ ರಮಾನಂದ ಅವಭೃತ ಅವರು ತಮ್ಮ ಕುಡಿಯುವ ಬಾವಿಯನ್ನು ಉಳಿಸಿಕೊಡುವಂತೆ ಮಾಡಿದ್ದ ಮನವಿಗಳು ಮೂಲೆ ಸೇರಿದ್ದವು. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಂಪೆನಿಯ ಕೆಲಸಗಾರರು ಬಂದು ಬಾವಿಯನ್ನು ತಕ್ಷಣ ಮುಚ್ಚುವಂತೆ ತಾಕೀತು ಮಾಡಿದ್ದು, ಗಾಬರಿಗೊಂಡ ಅವಭೃತರು ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ ಅವರಿಗೆ ಮನವಿ ಸಲ್ಲಿಸಿದ್ದರು. ಈ ಭಾಗದಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆ ಇದ್ದು ತಮ್ಮದೊಂದೇ ಬಾವಿಯಲ್ಲಿ ವಿಫುಲವಾಗಿ ನೀರಿದೆ. ಇದನ್ನು ಮುಚ್ಚಿದರೆ ತಮಗೆ ಬೇರೆ ಯಾವುದೇ ನೀರಿನ ಮೂಲವೇ ಇಲ್ಲ ಎಂದು ಕೋರಿದ್ದರು.
ಇವರ ಮನವಿಗೆ ಸ್ಪಂಧಿಸಿದ್ದ ಸಹಾಯಕ ಕಮಿಷನರ್ ಐ.ಆರ್.ಬಿ. ಕಂಪೆನಿಯವರಿಗೆ ಪರಿಸ್ಥಿತಿಯನ್ನು ವಿವರಿಸಿ ಸಾಧ್ಯವಾದ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ಬಾವಿಯ ತೊಂದರೆಯನ್ನು ನಿವಾರಣೆ ಮಾಡಲು ಉತ್ಸುಕರಾದ ಐ.ಆರ್.ಬಿ. ಅಧಿಕಾರಿ ಕುಲಕರ್ಣಿ ಅವರು ಸ್ಥಳಕ್ಕೆ ಭೇಟಿಕೊಟ್ಟು ಬಾವಿಯಿರುವ ಸ್ಥಳವನ್ನು ಪರಿಶೀಲಿಸಿದರು. ಅತ್ಯಂತ ಉತ್ತಮವಾಗಿ ನೀರಿನ ಆಶ್ರವಿರುವ ಬಾವಿಯನ್ನು ಮುಚ್ಚುವುದರಿಂದ ತೀವ್ರ ತೊಂದರೆಯಾಗುತ್ತದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದ್ದು ಬಾವಿ ಮಾಲೀಕರಿಗೆ ತೀವ್ರ ಸಂತಸವಾಗಿದೆ. ಬಾವಿಯ ನೀರನ್ನು ಉಪಯೋಗಿಸಿಕೊಳ್ಳುವಲ್ಲಿ ಮುಂದಿನ ಕ್ರಮಕ್ಕೆ ಮುಂದಾಗಿರುವುದು ಅಧಿಕಾರಿಗಳಲ್ಲಿ ಸಹಾಯ ಮಾಡುವ ಇಚ್ಚಾಶಕ್ತಿ ಇದ್ದರೆ ಎನೂ ಮಾಡಬಹುದು ಎನ್ನುವುದಕ್ಕೊಂದು ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ತಾಲೂಕಾ ಅಧ್ಯಕ್ಷ ಹಾಗೂ ಉತ್ತರ ಪ್ರಾಂತ ಉಪಾಧ್ಯಕ್ಷ ಶ್ರೀಧರ ಹೆಬ್ಬಾರ್ ಉಪಸ್ಥಿತರಿದ್ದರು.
Leave a Comment