ಭಟ್ಕಳ:
ಇಲ್ಲಿನ ಪ್ರತಿಷ್ಟಿತ ಸಂಸ್ಥೆಯಾಗಿರುವ ದಿ ಡೆಕ್ಕನ್ ವೆಲ್ಫೇರ್ ಅಸೋಶಿಯೇಶನ್ (ರಿ) ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಸಂಸ್ಥೆಯ ಕಚೇರಿಯಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ನಡೆದು ನೂತನ ಅಧ್ಯಕ್ಷರಾಗಿ ಮೊಹಿದ್ದೀನ್ ನಿಜಾಮ್ ಅವರು ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಡಾ. ನಸೀಮ್ ಅಹಮ್ಮದ್ ಖಾನ್, ಪ್ರಧಾನ ಕಾರ್ಯದರ್ಶಿಗಳಾಗಿ ನಝೀರ್ ಅಹಮ್ಮದ್ ಶೇಖ್, ಕಾರ್ಯದರ್ಶಿಯಾಗಿ ಅಬ್ದುಲ್ ಸತ್ತಾರ್ ಶೇಖ್, ಖಜಾಂಚಿಯಾಗಿ ಮೊಹಮ್ಮದ್ ಜುಬೇರ್ ಫರೀದಾ, ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ. ಸೈಯದ್ ಜಮೀರುಲ್ಲಾ ಷರೀಫ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಇಲ್ಯಾಸ್, ಕಾರ್ಯದರ್ಶಿ ಅಮ್ಜದ್ ಅಲಿ ಶೇಖ್ ಮುಂತಾದವರು ಉಪಸ್ಥಿತರಿದ್ದರು.
Leave a Comment