ಭಟ್ಕಳ:
ಮುರ್ಡೇಶ್ವರದ ಆರ್.ಎನ್.ಶೆಟ್ಟಿ ಪಿ.ಯು. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 116 ವಿದ್ಯಾರ್ಥಿಗಳಲ್ಲಿ 102 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.87.83 ಫಲಿತಾಂಶ ಬಂದಿದೆ. ಪೂಜಾ ಬೋವಿ 543 ಅಂಕ ಪಡೆದು ಕಾಲೇಜಿಗೆ ಪ್ರಥಮ, ಎಲ್ವಿರಾ ಲೂಯೀಸ್ 521 ಅಂಕ ಪಡೆದು ದ್ವಿತೀಯ, ಭವ್ಯ ದೇವಡಿಗ 519 ಪಡೆದು ತೃತೀಯ. ವಿಜ್ಞಾನ ವಿಭಾಗದಲ್ಲಿ ಒಟ್ಟೂ ಪರೀಕ್ಷಗೆ ಹಾಜರಾದ 53ರಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.83.01 ಫಲಿತಾಂಶ ಬಂದಿದೆ. . ಕವನಾ ನಾಯ್ಕ 530 ಪಡೆದು ಪ್ರಥಮ, ಮನೋಜ ನಾಯ್ಕ 523 ಪಡೆದು ದ್ವಿತೀಯ, ಅಕ್ಷಯ ಪ್ರಭು 517 ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟೂ 28ರಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.82.14 ಫಲಿತಾಂಶ ಬಂದಿದೆ. ಹೇಮಂತ ದೇವಡಿಗ 464 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಆರ್. ಎನ್. ಶೆಟ್ಟಿ, ನಿರ್ದೇಶಕ ಎಂ.ವಿ.ಹೆಗಡೆ, ಪ್ರಾಂಶುಪಾಲ ಮಾಧವ ಪಿ., ಬೋಧಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Leave a Comment