ಹಳಿಯಾಳ:
ಹಳಿಯಾಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದ ಒಟ್ಟು 2474 ವಿದ್ಯಾರ್ಥಿಗಳಲ್ಲಿ 1743 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ತಾಲೂಕಿನ ಫಲಿತಾಂಶ ಶೇ. 70.45% ರಷ್ಟಾಗಿದ್ದು ಒಟ್ಟಾರೆ ಫಲಿತಾಂಶದಲ್ಲೂ ಹೆಣ್ಣು ಮಕ್ಕಳೇ ಮೆಲುಗೈ ಸಾಧಿಸಿದ್ದಾರೆಂದು ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ಫಲಿತಾಂಶದ ವಿವರ ನೀಡಿದ ಅವರು ಈ ಬಾರಿ ಪರೀಕ್ಷೆ ಬರೆದಿದ್ದ 1209 ಗಂಡು ಮಕ್ಕಳಲ್ಲಿ 783 (64.76%), 1265 ಹೆಣ್ಣು ಮಕ್ಕಳಲ್ಲಿ 960 (75.89%) ಉತ್ತೀರ್ಣರಾಗಿದ್ದಾರೆಂದರು.
ಶಾಲಾವಾರು ಉತ್ತಮ ಫಲಿತಾಂಶ ದಾಖಲಿಸಿದ ಟಾಪ್ 5 ಶಾಲೆಗಳು: 1. ಹಳಿಯಾಳ ಪಟ್ಟಣದ ಮಿಲಾಗ್ರಿಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ 70 ವಿದ್ಯಾರ್ಥಿಗಳಲ್ಲಿ 66 ಮಕ್ಕಳು ತೆರ್ಗಡೆಯಾಗಿದ್ದು ಶಾಲೆ 94.29% ಫಲಿತಾಂಶ, 2) ಸೆಂಟ್ ಮೈಕಲ್ ಪ್ರೌಢ ಶಾಲೆ ದಾಂಡೇಲಿ 93.10%, 3) ಹಳಿಯಾಳ ಪಟ್ಟಣದ ಕಾರ್ಮೆಲ್ ಪ್ರೌಢ ಶಾಲೆ 91.06%, 4) ಸರ್ಕಾರಿ ಪ್ರೌಢಶಾಲೆ ಬೆಳವಟಗಿ 90%, 5) ಸರ್ಕಾರಿ ಪ್ರೌಢ ಶಾಲೆ ಅರ್ಲವಾಡ ಶೇ.89.80 ಫಲಿತಾಂಶ ದಾಖಲಿಸಿವೆ.
ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಟಾಪ್ 10 ವಿದ್ಯಾರ್ಥಿಗಳು :-
1. ತಾಲೂಕಿನ ದಾಂಡೇಲಿ ನಗರದ ಸೆಂಟ್ ಮೈಕಲ್ ಪ್ರೌಢಶಾಲೆಯ ಆಫ್ರಿನ್ ಮಿಶ್ರಿಕೋಟಿ ಶೇ. 99.02(620) ಪ್ರಥಮ ಸ್ಥಾನ ಇದೆ ಶಾಲೆಯ ಜಹೀನ್ ಸೈಯದ್ ಶೇ.98.72(617) ದ್ವಿತೀಯ ಸ್ಥಾನ ಇದೆ ಶಾಲೆಯ ನಿಖಿತಾ ಪೈ 98.56%(616) ತೃತೀಯ ಸ್ಥಾನ ಗಳಿಸಿದ್ದಾರೆ. ಇನ್ನೂ ದಾಂಡೇಲಿ ಜನತಾ ವಿದ್ಯಾಲಯದವರಾದ ಪ್ರೀತಿ ವಿ ಹಾಲಪ್ಪನವರ ಶೇ.98 (613), ಪ್ರಾಚಿ ವಿ ಕುಲರ್ಣಿ ಶೆ. 97.09(612), ಸಾಕ್ಷಿ ಎಸ್ ನರೂಟೆ ಶೆ. 97.09(612), ವಿನಾಯಕ ಜಿ ಬಡಿಕೇರ ಶೆ. 97.09(612), ಶ್ರೇಜಲ್ ಎಸ್ ಎಲೇಕರ ಶೆ. 97.07(611) ಕ್ರಮವಾಗಿ 4ರಿಂದ 8ನೇ ಸ್ಥಾನ ಪಡೆದುಕೊಂಡಿದ್ದರೇ ಮತ್ತೇ ದಾಂಡೇಲಿ ನಗರದ ಸೆಂಟ್ ಮೈಕಲ್ ಪ್ರೌಢಶಾಲೆಯ ಸಂಜಯ ದಂಡಗಲ್ಲ ಶೇ.97.44(609) ಸ್ಥಾನ 9 ಹಾಗೂ ದಾಂಡೇಲಿ ಜನತಾ ವಿದ್ಯಾಲಯದ ವರ್ಷಾ ವಿ ನಾಯಕ ಶೇ.97.44(609) ಪಡೆದು 10ನೇ ಸ್ಥಾನ ಪಡೆದುಕೊಂಡಿದ್ದಾಳೆಂದು ಶಿಕ್ಷಣಾಧಿಕಾರಿ ಸಿಎಸ್ ನಾಯ್ಕ ತಿಳಿಸಿದರು.
Leave a Comment