ಭಟ್ಕಳ:
ಇಲ್ಲಿಯ ಮೌಲಾನ ಕುಟುಂಬದ ಎಸ್.ಎಂ.ಸೈಯ್ಯದ್ ಮುಷ್ತಾಕ್ ಮಸೂದ್ ಅವರು ಅರಬ್ ದೇಶಗಳ ಪ್ರಸಿದ್ದ ಟಾಪ್ 50 ಭಾರತೀಯ ಎಕ್ಸಿಕ್ಯೂಟ್ಗಳ ಸಾಲಿನಲ್ಲಿ 42ನೇ ಸ್ಥಾನದಲ್ಲಿ ತಮ್ಮ ಹೆಸರನ್ನು ಗಿಟ್ಟಿಸಿಕೊಳ್ಳುವುದರ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಮಧ್ಯ ಪ್ರಾಚ್ಯದ ಫೋರ್ಬಸ್ ಸಂಸ್ಥೆ ಪ್ರಕಟಿಸಿದ ಖ್ಯಾತ ನಾಮರ ಟಾಪ್ 50 ಭಾರತೀಯ ಎಕ್ಸಿಕ್ಯೂಟ್ಗಳ ಯಾದಿಯಲ್ಲಿ ಇವರು ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಭಟ್ಕಳದ ಹೆಸರನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತಾಗಿದೆ. ಭಟ್ಕಳದ ಮೌಲಾನ ಲುಂಗಿ ದೇಶ, ವಿದೇಶಗಳಲ್ಲಿ ಹೆಸರು ಮಾಡಿದೆ. ಈಗ ಅದೇ ಕುಟುಂಬದ ಸದಸ್ಯರೊಬ್ಬರು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿರುವುದು ಭಟ್ಕಳಕ್ಕೊಂದು ಹೆಮ್ಮೆಯ ವಿಷಯವಾಗಿದೆ.
ಮೌಲಾನ ಲುಂಗೀಸ್ನ ನಿರ್ದೇಶಕ ಹಾಗೂ ಮೀಟಾಲೆಕ್ಸ್ ಎಜೆನ್ಸೀಸ್ ಎರ್ನಾಕುಲಂ ಇದರ ಪಾಲುದಾರ ಎಸ್.ಎಂ.ಸೈಯ್ಯದ್ ಮಸೂದ್ ಇವರ ಪುತ್ರರಾಗಿರುವ ಮುಷ್ತಾಖ್ ಮಸೂದ್ ದುಬೈ ಇನ್ವೆಸ್ಟ್ಮೆಂಟ್ ಗ್ರೂಪ್ ಪಿ.ಜೆ.ಎಸ್.ಸಿ ಯ ಸಿಎಫ್ಓ ಹುದ್ದೆಯನ್ನು ಅಲಂಕರಿಸಿದ್ದಾರೆ. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಇವರು ಈ ಸಾಧನೆ ಮಹತ್ವದ್ದಾಗಿದೆ. ಫೊರ್ಬಸ್ ಮಿಡ್ಲ ಈಸ್ಟ್ ಸಂಸ್ಥೆಯು ಮುಷ್ತಾಖ್ ಅವರ ಉತ್ತಮ ಕಾರ್ಯವೈಖರಿಯನ್ನು ಗಮನಿಸಿ ತನ್ನ ಟಾಪ್ 50 ಮಂದಿಯಲ್ಲಿ ಸ್ಥಾನವನ್ನು ನೀಡಿರುವುದು ಇವರ ಪ್ರತಿಭೆಗೆ ಸಂದ ಗೌರವವಾಗಿದೆ. ದುಬೈ ಇನ್ವೆಸ್ಟ್ಮೆಂಟ್ ಪಿಜೆಎಸ್ಸಿ ಕಂಪೆನಿಯ ಗ್ರೂಪ್ ಸಿ.ಎಫ್.ಓ ಆಗಿರುವ ಇವರು ಹಣಕಾಸು ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ. ಫೈನಾನ್ಶಿಯಲ್ ಇಂಡಸ್ಟ್ರಿಯಲ್ ಮತ್ತು ರಿಯಲ್ ಎಸ್ಟೇಟ್ನಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಈ ಕಂಪನಿಯ ಸಂಪೂರ್ಣ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಇವರು ತಮ್ಮ ಪ್ರತಿಭೆಯಿಂದಾಗಿ ಕಂಪನಿಯನ್ನು ಯಶಸ್ಸಿನ ಉತ್ತುಂಗಕ್ಕೇರುವಂತೆ ಮಾಡಿದ್ದಲ್ಲದೆ, ಇದರ ಉಪ ಸಂಸ್ಥೆಗಳಾದ ಅಲ್ ಮಾಲ್ ಕ್ಯಾಪಿಟಲ್ ಪಿಎಸ್ಸಿ ಇದರ ಬೋರ್ಡ್ ಆಫ್ಡೈರಕ್ಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
Leave a Comment