ಭಟ್ಕಳ:
ಪ್ರತಿಷ್ಟಿತ ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಅಂಜುಮಾನ್ ಕಾಲೇಜ್ ಆಫ್ ಎಜ್ಯುಕೇಶನ್ ಸಂಸ್ಥೆಯಲ್ಲಿನ 2017-18ನೇ ಬಿ.ಇಡಿ. ಬ್ಯಾಚ್ನ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿಗೆ ಶೇ.100 ಫಲಿತಾಂಶ ಬರುವುದರೊಂದಿಗೆ 27 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 6 ಜನರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸ್ವಾತಿ ನಾಗೇಶ ದೇಶಭಂಡಾರಿ ಶೇ.81.66 (511) ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ, ಸುಧಾ ಸುಕ್ರಪ್ಪ ನಾಯ್ಕ ಶೇ.85 (510) ಅಂಕಗಳೊಂದಿಗೆ ದ್ವಿತೀಯ, ಖಮರುನ್ನಿಸಾ ಶೇ.84.83 (509) ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ. ಉಳಿದಂತೆ ಕಿರಣ್ ದೇವಡಿಗ ಶೇ.84.50, ಸಂಧ್ಯಾ ದೇವಪ್ಪ ಗಡಿಗ ಶೇ.84.50, ಜೈನುಲ್ ಅರಬ್ ಶೇ.84.50 ಅಂಕಗಳನ್ನು ಗಳಿಸಿದ್ದಾರೆ.
ಕಾಲೇಜಿನಿಂದ ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಅಬ್ದುರ್ ರಹೀಂ ಜುಕಾಕೊ, ಪ್ರಧಾನ ಕಾರ್ಯದರ್ಶಿ ಸಿದ್ಧಿಕ್ ಇಸ್ಮಾಯಿಲ್, ಕಾಲೇಜಿನ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Leave a Comment