ಕಳೆದ ಮಾರ್ಚ್ 2017 ರಲ್ಲಿ ನಡೆದ (ಐ.ಸಿ.ಎಸ್.ಸಿ.) ಪರೀಕ್ಷೆಯ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆ ಐ.ಸಿ.ಎಸ್.ಸಿ. ಸಿಲೆಬಸ್ನಲ್ಲಿ ಶೇ.100% ಫಲಿತಾಂಶ ಪಡೆದ ಉತ್ತರ ಕನ್ನಡದ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶಾಲೆಯ ವಿದ್ಯಾರ್ಥಿಗಳಾದ ನಂದಕಿಶೋರ ಹೆಗಡೆ ಶೇ.90% ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದು, ಮೆತಾಬ್ ಜುಬಾಪು ಶೇ.86.5% ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಏರಿಕಾ ಶೇ.78.83% ಗಳೊಂದಿಗೆ ತೃತೀಯ ಸ್ಥಾನ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಏಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ ಹಾಗೂ ಬೋೀಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Leave a Comment