ದಾಂಢೇಲಿ :
ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಸಕ್ತÀ ಸಾಲಿನ ಶಾಲಾ ಸಂಸತ್ತನ್ನು ಮುಖ್ಯಾದ್ಯಾಪಕಿ ಸಿಸ್ಟರ್ ಸುಹಾಸಿನಿಯವರ ನೇತೃತ್ವದಲ್ಲಿ ರಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾದ್ಯಾಪಕಿ ಸಿಸ್ಟರ್ ಸುಹಾಸಿನಿಯವರು ಮಕ್ಕಳು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕೆಂಬ ಉದ್ಧೇಶದಿಂದ ಶಾಲಾ ಸಂಸತ್ತು ರಚಿಸಲಾಗುತ್ತಿದ್ದು, ಮಕ್ಕಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಶಿಸ್ತು ಮತ್ತು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ವಿದ್ಯಾರ್ಥಿ ನಾಯಕ ತರುಣ ಮುರಗೋಡನವರು ಮಂತ್ರಿಮಂಡಲ ರಚಿಸಿದಕ್ಕೆ ಅಭಿನಂದಿಸಿ ಮಾತನಾಡಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.
Leave a Comment