ದಾಂಡೇಲಿ:
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಪರಿಶಿಷ್ಠ ಜಾತಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ದಾಂಡೇಲಿ ನಗರದಿಂದ ಹಲವಾರು ಸರ್ಕಾರಿ ಸಿಬ್ಬಂದಿಗಳು, ಕೃಷಿಕರು, ಪ್ರವಾಸಿಗರು ಮುಂಡಗೋಡ ನಗರಕ್ಕೆ ಹೋಗುವುದು ಬರುವುದು ಮಾಡುತ್ತಾರೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿರುತ್ತದೆ. ಕಾರಣ ದಾಂಡೇಲಿ – ಮುಂಡಗೋಡ ವಾಯಾ ಹಳಿಯಾಳ – ಕಲಘಟಗಿ ಬಸ್ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕು. ದಾಂಡೇಲಿ ನಗರದಲ್ಲಿ ನಿಯಮಿತವಾಗಿ ಬೆಳಗ್ಗೆ ಶಾಲಾ ಸಮಯಕ್ಕೆ ಸಿಟಿ ಬಸ್ ಬಸ್ ನಿಲ್ದಾಣದಿಂದ ಗಣೇಶನಗರ ಮಾರ್ಗವಾಗಿ – ಅಂಬೇವಾಡಿ – ಗಾಂವಠಾಣ ನವಗ್ರಾಮ – ಕೆ.ಇ.ಬಿ – ಸುದರ್ಶನನಗರ ಮಾರ್ಗವಾಗಿ ಬಸ್ ಪ್ರಯಾಣಿಸುತ್ತದೆ. ಆದರೆ ಇದೇ ಬಸ್ ಸಾಯಂಕಾಲ 4 ಗಂಟೆಗೆ ಬಸ್ ನಿಲ್ದಾಣದಿಂದ ಗಣೇಶನಗರ – ಅಂಬೇವಾಡಿ – ಗಾವಠಾಣ – ನವಗ್ರಾಮ ಮಾರ್ಗವಾಗಿ ಸುದರ್ಶನಗರಕ್ಕೆ ಹೋಗದೇ ಬಸ್ ನಿಲ್ದಾಣಕ್ಕೆ ಹಿಂದಿರುತ್ತದೆ. ಬಸ್ ಸಾಯಂಕಾಲ ಶಾಲೆ ಬಿಡುವ ಮುಂಚೆಯೇ 4 ಗಂಟೆಗೆ ಬಿಡುವುದುರಿಂದ ಶಾಲಾ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಪ್ರೌಢ ಶಾಲೆಯ ಹೆಣ್ಣು ಮಕ್ಕಳು ಶಾಲೆಯಿಂದ ಅಷ್ಟು ದೂರ ನಡೆದು ಕೊಂಡು ಹೋಗುವುದು ಕಂಡು ಬಂದಿರುತ್ತದೆ. ಇದರಿಂದ ತುಂಬಾ ಅನಾನುಕೂಲತೆ ಆಗುತ್ತಿದೆ. ಕಾರಣ ತಕ್ಷಣ ಸಾಯಂಕಾಲ 4.40 ಕ್ಕೆ ಹೊಸ ಬಸ್ ನಿಲ್ದಾಣದಿಂದ – ಚೆನ್ನಮ್ಮ ವೃತ್ತ – ಜೆ.ವಿ.ಡಿ. – ಬಾಂಬುಗೇಟ್ – ಟಿ.ಆರ್.ಟಿ – ಸುದರ್ಶನನಗರ – ಅಂಬೇವಾಡಿ – ಗಣೇಶನಗರ – ಬಸ ನಿಲ್ದಾಣ ಕ್ಕೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅಶೋಕ ಪಾಟೀಲ, ರವಿ ಕಾಮತ ಮುಂತಾದವರಿದ್ದರು.
Leave a Comment