ಕಾರವಾರ:
2017-18 ನೇ ಸಾಲಿನ ಸರಕಾರಿ, ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರಥಮ ಡಿಪ್ಲೋಮಾ ಪ್ರವೇಶಾತಿಗೆ ಆನ್ಲೈನ್ ಇಂಟರಾಕ್ಟೀವ್ ಕೌನ್ಸಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತಿದ್ದು, ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಕೌನ್ಸಲಿಂಗ್ ನೋಡಲ್ ಕೇಂದ್ರವನ್ನಾಗಿ ಮಾಡಲಾಗಿದೆ.
ಪ್ರವೇಶ ಪ್ರಕ್ರಿಯೇಗೆ ಸಂಬಂಧಿಸಿದಂತೆ ಮೆರಿಟ್ ಸಂಖ್ಯೆಗೆ ಅನುಗುಣವಾಗಿ ಕೌನ್ಸಲಿಂಗ್ ದಿನಾಂಕಗಳ ವೇಳಾಪಟ್ಟಿಯನ್ನು ಲಗತ್ತಿಸಲಾಗಿದೆ. ಜೂನ್ 16 ರಂದು 1 ರಿಂದ 1400, 17ಕ್ಕೆ 1401 ರಿಂದ 2800, 18ಕ್ಕೆ 2801 ರಿಂದ 4900, 19ಕ್ಕೆ 4901 ರಿಂದ 7400, 20ಕ್ಕೆ 7401 ರಿಂದ 10,300, 21ಕ್ಕೆ10301 ರಿಂದ 13600, 22ಕ್ಕೆ 13601 ರಿಂದ 16900, 23ಕ್ಕೆ 16901 ರಿಂದ 20200, 24ಕ್ಕೆ 20201 ರಿಂದ 23500, 25ಕ್ಕೆ 23501 ರಿಂದ 26800, 27ಕ್ಕೆ 26801 ರಿಂದ 30100, 28ಕ್ಕೆ 30101 ರಿಂದ 33840, 29ಕ್ಕೆ 33841 ರಿಂದ 37840 ಹಾಗೂ 30 ರಂದು 37841 ರಿಂದ ಕೊನೆಯ ರ್ಯಾಂಕ್ವರೆಗಿನ ಎಲ್ಲ ವಿದ್ಯಾರ್ಥಿಗಳ ಕೌನ್ಸಲಿಂಗ್ ನಡೆಯಲಿದೆ.
ಪ್ರತಿ ದಿನ ಕೌನ್ಸಲಿಂಗ್ ಬೆಳಿಗ್ಗೆ ಹಾಗೂ ಸಂಜೆ ಸೇರಿ ಒಟ್ಟು 4 ಹಂತದಲ್ಲಿ ನಡೆಯಲಿದೆ. ಮೊದಲ ಹಂತ ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ನಡೆಯಲಿದ್ದು, 8 ಗಂಟೆಗೆ ಕಾಲೇಜಿನಲ್ಲಿ ಉಪಸ್ಥಿತರಿದ್ದು ವರದಿ ಸಲ್ಲಿಸಬೇಕು. ಅದೆ ರಿತಿ ಬೆಳಿಗ್ಗೆ ಎರಡನೇ ಹಂತ ಬೆಳಿಗ್ಗೆ 11.15 ರಿಂದ ಮಧ್ಯಾಹ್ನ 1.15ರವರೆಗೆ, 10. 15ಕ್ಕೆ ಹಾಜರಿರಬೇಕು. ಮಧ್ಯಾಹ್ನ ಮೊದಲ ಹಂತ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ, 1 ಗಂಟೆಗೆ ವರದಿ ಸಲ್ಲಿಸಬೇಕು. ಮಧ್ಯಾಹ್ನ ಎರಡನೇ ಹಂತ 4.15 ರಿಂದ 615ರವರೆಗೆ ನಡೆಯಲಿದ್ದು, 3.15 ವರದಿ ಸಲ್ಲಿಕೆಗೆ ಮಾಡಿಕೊಳ್ಳಬೇಕು.
ಡಿಪೊ ್ಲೀಮಾ ಸೀಟು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಹ ಅಭ್ಯರ್ಥಿಗಳು ರಾಜ್ಯದಾದ್ಯಂತ ತೆರೆದಿರುವ 19 ಆನ್ಲೈನ್ ಇಂಟರಾಕ್ಟೀವ್ ಕೌನ್ಸಲಿಂಗ್ ಕೇಂದ್ರಗಳಲ್ಲಿ ವೇಳಾಪಟ್ಟಿಯನುಸಾರ ತಮ್ಮ ಮೆರಿಟ್ ಸಂಖ್ಯೆಯಗನುಗುಣವಾಗಿ ಹಾಜರಾಗಬೇಕು. ವಿದ್ಯಾರ್ಥಿಗಳು ಕೌನ್ಸಲಿಂಗ್ ಸಮಯದಲ್ಲಿ ಸಂಬಂಧಪಟ್ಟ ಎಲ್ಲಾ ಮೂಲ ಪ್ರಮಾಣಪತ್ರಗಳನ್ನು ಮತ್ತು ಅವುಗಳ ಒಂದು ಸೆಟ್ ಝೇರಾಕ್ಸ್ ಪ್ರತಿಯನ್ನು, ನಿಗದಿತ ಶುಲ್ಕ ಮತ್ತು ಫೋಟೋ ಕಡ್ಡಾಯವಾಗಿ ತರಬೇಕು. ಶುಲ್ಕ ಮತ್ತು ಇತ್ಯಾದಿ ವಿವರಗಳನ್ನು ವೆಬ್ಸೈಟ್ http://www.kea.kar.nic.in & http://www.dte.kar.nic.in ಮೂಲಕ ಪಡೆದುಕೊಳ್ಳಬಹುದು. ಅಥವಾ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ಕೋರಿದ್ದಾರೆ.
Leave a Comment