ದಾಂಡೇಲಿ :
ನಗರದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ನಲ್ಲಿ ಸಣ್ಣ ಪ್ರಮಾಣದ ಅವಘಡವೊಂದು ಶುಕ್ರವಾರ ಮುಂಜಾನೆ ಸಮಯ ಸುಮಾರು 4.30 ಕ್ಕೆ ಸಂಭವಿಸಿದ ಘಟನೆ ನಡೆದಿದೆ.
ಕಾಗದ ಕಾರ್ಖಾನೆಯ ಪವರ್ ಹೌಸ್ಗೆ ಸಂಬಂಧಪಟ್ಟ ಸ್ಟೀಮ್ ಲೈನ್ ಪಂಚರ್ ಆಗಿ ಒಡೆದುಹೋಗಿದ್ದು, ಇದು ಒಡೆದ ಸಂದರ್ಭದಲ್ಲಿ ಶಬ್ದಕ್ಕೆ ಹೆದರಿ ಓಡಲೆತ್ನಿಸಿದ ಭೀಮಪ್ಪ ಎಂಬ ಕಾರ್ಮಿಕನೊಬ್ಬನು ಬಿದ್ದು ಅಲ್ಪ ಗಾಯಗೊಂಡಿರುವ ಘಟನೆಯೊಂದು ಬಿಟ್ಟರೇ ಉಳಿದಂತೆ ಯಾವುದೆ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಇದರ ಶಬ್ದ ಕಾಗದ ಕಾರ್ಖಾನೆ ಹಾಗೂ ಕಾರ್ಖಾನೆಯ ಆವರಣದ ಸಮೀಪಕ್ಕೂ ಕೇಳಿಬಂದಿದ್ದು, ಸ್ವಲ್ಪ ಹೊತ್ತು ಆತಂಕಕ್ಕೆ ಕಾರಣವಾಗಿತ್ತು. ಮುಂಜಾನೆಯಾಗುತ್ತಿದ್ದಂತೆಯೆ ಈ ಸುದ್ದಿ ನಗರದಲ್ಲಿ ಮಿಂಚಿನಂತೆ ಸಂಚಾರವಾಗಿತ್ತು.
ಯಾವುದೇ ರೀತಿಯ ತೊಂದರೆಯಾಗಿಲ್ಲ : ಕೆ.ಜಿ.ಗಿರಿರಾಜ
ಈ ಬಗ್ಗೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ ಅವರನ್ನು ಮಾತನಾಡಿಸಿದಾಗ, ಉತ್ಪದನಾ ಘಟಕದಲ್ಲಿ ಈ ರೀತಿಯ ಸಣ್ಣ ಪುಟ್ಟ ತಾಂತ್ರಿಕ ದೋಷಗಳು ಕಂಡುಬರುವುದು ಸಹಜ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾರ್ಖಾನೆಯು ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಿಲ್ಲ. ತಾಂತ್ರಿಕ ತೊಂದರೆಗಳನ್ನು ತ್ವರಿಗತಿಯಲ್ಲಿ ನಿವಾರಿಸಲು ಕಾರ್ಖಾನೆ ಸದಾ ಸನ್ನದ್ದವಿರುತ್ತದೆ ಎಂದಿದ್ದಾರೆ.
Leave a Comment