ಕಾರವಾರ:
ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ಒತ್ತು ನೀಡಿದ್ದು, ಪ್ರವಾಸಿ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸುತ್ತಿದೆ. ಸದ್ಯ ಕಡಲ ತೀರಗಳ ಅಭಿವೃದ್ಧಿಗಾಗಿ ಕೋಸ್ಟಲ್ ಮೇಗಾ ಪ್ರೋಜೆಕ್ಟ್ ಎನ್ನುವ ಯೋಜನೆ ಅಡಿಯಲ್ಲಿ ಸುಮಾರು 35 ಕೋಟಿ ರೂ. ಮಂಜೂರಿಗೆ ಸರಕಾರ ನಿರ್ಧರಿಸಿದೆ.
ಅಭಿವೃದ್ಧಿ ಹೊಂದುತ್ತಿರುವ ಕಡಲ ತೀರಗಳ ಜೊತೆಗೆ ಇನ್ನಷ್ಟು ಕಡಲ ತೀರಗಳ ಅಭಿವೃದ್ಧಿ ನಡೆಸಲು ಕೋಸ್ಟಲ್ ಮೇಗಾ ಪ್ರೋಜೆಕ್ಟ್ ಅಡಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚೇತನ ನೀಡಲು ಸರಕಾರ ನೂತನ ಯೋಜ£ಯನ್ನು ಸಿದ್ದ ಮಾಡಿಕೊಂಡಿದೆ. 12 ಕಡಲ ತೀರಗಳಿಗೆ ಅಭಿವೃದ್ಧಿಯ ಸಲುವಾಗಿ ಈ ಯೋಜೆನೆ ರೂಪುಗೊಂಡಿದೆ. ಧಾರೇಶ್ವರ, ಗೋಕರ್ಣದ ಓಂ ಕಡಲತೀರ, ಕುಡ್ಲೆ ಕಡಲತೀರ, ಪಾವಿನ ಕುರ್ವಾ ಬಿಚ್, ಮುರುಡೇಶ್ವರ, ಕಾರವಾರ ಕಡಲತೀರ, ಮಾಜಾಳಿ ಸೇರಿದಂತೆ ಇನ್ನಿತರ ಕಡಲತೀರಗಳು ಈ ಯೋಜನೆಗೆ ಒಳಪಟ್ಟಿವೆ.
ಅಭಿವೃದ್ಧಿ ನಡೆಸಲು ಮುಂದಾಗಿರುವ ಸರಕಾರ 38 ಕೋಟಿ ರೂ. ಅನುದಾನದಲ್ಲಿ ಪ್ರಮುಖವಾಗಿ ಆಯಾ ಕಡಲತೀರದಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಿದೆ. ಉಳಿದಂತೆ ಕಡಲತೀರಗಳ ಮಾಹಿತಿ, ಬೋರ್ಟ್, ಲೈಪ್‍ಗಾರ್ಡ್, ಗೋಪುರ, ಕಡಲತೀರದಲ್ಲಿ ಈಜಾಡಿದವರಿಗೆ ಶಾವರ್ ವ್ಯವಸ್ಥೆ ಸೇರಿದಂತೆ ಪ್ರಮುಖ ಬದಲಾವಣೆಗಳು ನಡೆಯಲಿದೆ.
************************* ಕೋಟ್
ಜಿಲ್ಲೆಯ ಸುಮಾರು 12 ಕಡಲತೀರಗಳ ಅಭಿವೃದ್ಧಿಗೆ ಸರಕಾರ ಮುಂದಾಗಿದ್ದು ಕೋಸ್ಟಲ್ ವೇಗಾ ಪ್ರೋಜೆಕ್ಟ್ ಯೋಜನೆ ಅಡಿಯಲ್ಲಿ ಬರುವ ಅನುದಾನದಲ್ಲಿ ಅಭಿವೃದ್ಧಿಯಾಗಲಿದೆ. ಸರಕಾರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಜಿಲ್ಲೆಗೆ ಪ್ರವಾಸಿಗರು ಬರುವ ಸಂಖ್ಯೆಯು ಹೆಚ್ಚುತ್ತಿದ್ದು ಪ್ರವಾಸಿಗರಿಗೆ ಪೂಕರ ವಾತಾವರಣ ಸೃಷ್ಟಿಸುವ ಕಾರ್ಯ ಸರಕಾರ ಕೈಗೆತ್ತಿಕೊಂಡಿದೆ.
ಗೋಪಾಲಕೃಷ್ಣ ಬೇಕಲ್
ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ
Leave a Comment