ಕಾರವಾರ:
ಸಾಮಾಜಿಕ ಜಾಲತಾಣಗಳಲ್ಲಿ ಪ.ಜಾ. ಹಾಗೂ ಪ.ಪಂ. ಜನಾಂಗದ ವ್ಯಕ್ತಿಗಳನ್ನು ಗುರಿಯಾಗಿರಿಸಿ ನಿಂದನಾತ್ಮಕ ಬರಹಗಳನ್ನು ಪ್ರಕಟಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಂತಹವರಿಗೆ ಪ.ಜಾ. ಹಾಗೂ ಪ.ಪಂ. ಸಮುದಾಯದವರ ಮೇಲಿನ ದೌರ್ಜನ್ಯ ತಡೆ 1989ರ ಕಾಯಿದೆಯನ್ವಯ ದೂರು ದಾಖಲಿಸಿ ಕಾನುನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬುಧವಾರ ದೂರು ಸಲ್ಲಿಸಿದ ಸಮಿತಿಯ ಕಾರ್ಯಕರ್ತರು ದರ್ಶನ ರೇವಣಕರ ಎಂಬ ವ್ಯಕ್ತಿಯು ಹಿಂದುಳಿದ ಜನಾಂಗದವರಿಗೆ ಬಿಕಾರಿಗಳು ಎಂದು ನಿಂದಿಸಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿರುದ್ಧ ಅವಹೇಳನಕಾರಿಯಾಗಿ ವರ್ತಿಸಿರುವ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಆಗ್ರಹಿಸಿದೆ.ಉದಯ ಶೆಟ್ಟಿ,ದೀಪಕ ಕುಡಾಲಕರ,ಇತರರಿದ್ದರು.
Leave a Comment