ಮಾರ್ ಥೋಮ ಸೆಂಟ್ರಲ್ ಶಾಲೆಯಲ್ಲಿ 2017-18 ರ ಸ್ಕೌಟ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಮಾರ್ ಥೋಮ ಸೆಂಟ್ರಲ್ ಸ್ಕೂಲ್ ಹಾಗೂ ಮಾರ್ ಥೋಮ ಆಂಗ್ಲ ಮಾಧ್ಯಮ ಶಾಲೆಯ 2017-18ನೇ ಸಾಲಿನ ಸ್ಕೌಟ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ರಾಜ್ಯ ಪುರಸ್ಕಾರ ಪಡೆದ ಶಾಲೆಯ 3 ಸ್ಕೌಟ ಮತ್ತು 2 ಗೈಡ್ಸ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲೆಯ ಮೆನೇಜರ ರೆ|| ಜೋನ್ ಉಮ್ಮನ್, ಖಜಾಂಚಿಗಳಾದ ಶ್ರೀ. ಕೆ. ಸಿ. ವರ್ಗೀಸ್, ಶೈಕ್ಷಣಿಕ ನಿರ್ದೇಶಕರಾದ ಶ್ರೀ. ಹೆಚ್. ಎನ್. ಪೈ, ಪ್ರಾಂಶುಪಾಲರಾದ ಶ್ರೀಮತಿ. ತೆರೆಸಾ ಫರ್ನಾಂಡೀಸ್ ಉಪಸ್ಥಿತರಿದ್ದರು. ಸ್ಕೌಟ ಶಿಕ್ಷಕರಾದ ಶ್ರೀ. ಮುರಲಿ ವಿ. ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀ. ಬಿ. ಡಿ. ಫರ್ನಾಂಡೀಸ್ ವಂದನಾರ್ಪಣೆಯನ್ನು ಮಾಡಿದರು. ಸಹ ಶಿಕ್ಷಕರಾದ ಶ್ರೀ. ಮಂಜುನಾಥ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಕೌಟ ಶಿಕ್ಷಕರಾದ ಶ್ರೀ. ನರೇಶ ನಾಯ್ಕ ಮತ್ತು ಶಿಕ್ಷಕಿ ಶ್ರೀಮತಿ. ಆಶಾ ನಾಯ್ಕ ಉಪಸ್ಥಿತರಿದ್ದರು.
Leave a Comment