ಕಾರವಾರ:
ಜಿಲ್ಲಾಸ್ಪತ್ರೆಯಿಂದ ಅವರು ಗುರುವಾರ ಬೆಳಗ್ಗೆ ಬಿಡುಗಡೆಯಾದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪದ್ಮಶ್ರಿ ಪುರಸ್ಕøತ ಸುಕ್ರಿ ಗೌಡ ಚೇತರಿಸಿಕೊಂಡಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ್ದ ಸುಕ್ರಜ್ಜಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಹೀಗಾಗಿ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರು ಆಸ್ಪತ್ರೆಯಲ್ಲಿ ಇರಲು ಇಚ್ಚಿಸದ ಸುಕ್ರಜ್ಜಿ ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ವೈದ್ಯರನ್ನು ಒತ್ತಾಯಿಸಿದ್ದರು. ಹೀಗಾಗಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಕ್ರಜ್ಜಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು. ಇದಾದ ಮೇಲೆ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಸುಕ್ರಜ್ಜಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಆಸ್ಪತ್ರೆಯಲ್ಲಿನ ಆರೈಕೆಯ ಬಗ್ಗೆ ಸುಕ್ರಜ್ಜಿಯೂ ಸಮಾಧಾನ ವ್ಯಕ್ತಪಡಿಸಿದ್ದರು. ಗುರುವಾರ ಬೆಳಗ್ಗೆ ಚೇತರಿಸಿಕೊಂಡಿರುವ ಸುಕ್ರಿ ಗೌಡ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕರ ಕಾರಿನಲ್ಲಿ ಊರಿಗೆ ತೆರಳಿದರು.
Leave a Comment