ಕಾರವಾರ:
ಪಹರೆ ವೇದಿಕೆ ವತಿಯಿಂದ ಕನ್ನಡ ಭವನದಲ್ಲಿ ಶನಿವಾರ ಸಂಜೆ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಪ್ರವಾಸೋಧ್ಯಮ ಬೆಳವಣಿಕೆ ಕುರಿತು ಚರ್ಚೆ ನಡೆಯಿತು. ವೆಬ್‍ಸೈಟ್ ಬಳಕೆ, ಆಧುನಿಕ ತಂತ್ರಜ್ಷಾನ ಸದುಪಯೋಗ, ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕುರಿತು ಮಾಹಿತಿ ನೀಡಲಾಯಿತು. ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅವನ್ನು ಪ್ರವಾಸಿಗರಿಗೆ ಪರಿಚಯಿಸುತ್ತ ಉದ್ಯೋಗ ಸೃಷ್ಠಿಸುವ ಕುರಿತು ಚರ್ಚೆ ನಡೆಯಿತು.ಉದ್ಯಮಿಗಳಾದ ಡಾ. ರವಿರಾಜ ಕಡ್ಲೆ, ರಾಜೀವ ಗಾಂವ್ಕರ್ ಇನ್ನಿತರು ಚರ್ಚೆಯಲ್ಲಿ ಭಾಗವಹಿಸಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಹೋಂ ಸ್ಟೇ ಸ್ಥಾಪನೆ ಹಾಗೂ ಅಭಿವೃದ್ದಿ ವಿಷಯವಾಗಿ ಸಂವಾದ ಕಾರ್ಯಕ್ರಮ ನಡೆದಿದ್ದು, ಹೋಂ ಸ್ಟೇ ಸ್ಥಾಪನೆಗೆ ಕಾರವಾರ ಹಾಗೂ ಜಿಲ್ಲೆಯಲ್ಲಿ ಇರುವ ಅವಕಾಶಗಳ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು. ಹೋಂ ಸ್ಟೇ ಸ್ಥಾಪನೆಗೆ ಅನುಸರಿಸಬೇಕಾದ ಕಾನೂನು ಕ್ರಮಗಳ ಕುರಿತು ಡಾ. ರವಿರಾಜ ಕಡ್ಲೆ ಮಾಹಿತಿ ನೀಡಿದರು. ರಾಜೀವ ಗಾಂವ್ಕರ್ ಹೋಂ ಸ್ಟೇ ಬಗೆ ಹಾಗೂ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಕುರಿತು ತಿಳುವಳಿಕೆ ಮೂಡಿಸಿದರು. ಸ್ವಚ್ಚತೆಗೆ ಆದ್ಯತೆ ನೀಡಿದಲ್ಲಿ ಪ್ರವಾಸೋಧ್ಯಮ ಅಭಿವೃದ್ದಿಗೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳುವಂತೆ ಉದ್ಯಮಿಗಳು ಕರೆ ನೀಡಿದರು. ಕಾರವಾರ ತಾಲೂಕಿನ ಗುಡ್ಡಳ್ಳಿ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರವಾಸೋಧ್ಯಮ ಬೆಳವಣಿಗೆಗೆ ಪೂರಕವಾಗಿರುವ ವಿಷಯಗಳ ಕುರಿತು ಚರ್ಚೆ ನಡೆಯಿತು. ಯಶಸ್ವಿ ಉದ್ಯಮ ನಡೆಸುತ್ತಿರುವ ಓಸಿಯನ್ ಡೆಗ್ ಹೋಂ ಸ್ಟೇ ಮಾಲಿಕ ವಿನಾಯಕ ನಾಯ್ಕರನ್ನು ಪಹರೆ ವೇದಿಕೆ ಮೂಲಕ ಸನ್ಮಾನಿಸಲಾಯಿತು. ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ನಿರ್ವಹಿಸಿದರು.ಬಂದರು ಇಲಾಖೆ ಅಧಿಕಾರಿ ಸುರೇಶ ಶೆಟ್ಟಿ ವೇದಿಕೆಯಲ್ಲಿದ್ದರು.
Leave a Comment