ಕಾರವಾರ:
ದಶಕಗಳ ಹಿಂದೆ ಭೂಸ್ವಾಧೀನಗೊಂಡಿದ್ದ ದೇವಕಾರ ಗ್ರಾಮದ ಜನರಿಗೆ ಕದ್ರಾದಲ್ಲಿ ಪುರ್ನಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಜಿಲ್ಲಾಡಳಿತವೂ ದೇವಕಾರ ಗ್ರಾಮದ ನಿರಾಶ್ರಿತರಿಗೆ ಕದ್ರಾ ಗ್ರಾಮ ಪಂಚಾಯತಿಯಲ್ಲಿರುವ ಸರಕಾರಿ ಪಡ ಜಾಗೆಯಲ್ಲಿ ನಿವೇಶನ ನೀಡುವ ತೀರ್ಮಾನಕ್ಕೆ ಬಂದಿದೆ ಎಂದು ಶಾಸಕ ಸತೀಶ್ ಸೈಲ್ ತಿಳಿಸಿದರು. ದೇವಕಾರಗೆ ಭೇಟಿ ನೀಡಿದ ಶಾಸಕ ಸತೀಶ್ ಸೈಲ್ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಿದರು. ದೇವಕಾರ ಗ್ರಾಮವು ಎನ್.ಪಿ.ಸಿ.ಎಲ್. ಕೈಗಾ ಮತ್ತು ಕೆ.ಪಿ.ಸಿ ಕೋಡ್ಸಳ್ಳಿ ಘಟಕಗಳ ನಡುವೆ ಇರುವ ಕಾಳಿ ನದಿಯಲ್ಲಿನ ದ್ವೀಪವಾಗಿದೆ. ಜನ ದೋಣಿ ಮೂಲಕ ಈ ಗ್ರಾಮ ಸೇರಬೇಕಿದೆ. ಸರ್ಕಾರ ಭೂ ಸ್ವಾಧೀನ ಮಾಡಿದಾಗ ಇಲ್ಲಿನವರಿಗೆ ಬೇರೆಡೆ ಜಾಗ ಕೊಟ್ಟಿರಲಿಲ್ಲ. ಹೀಗಾಗಿ ಸೂಕ್ತ ನೆಲೆ ಇಲ್ಲದೇ ಜನ ಪರದಾಡುತ್ತಿದ್ದರು. ಹೀಗಿರುವಾಗ ಸರ್ಕಾರ ಕದ್ರಾದಲ್ಲಿ ಪುನರ್ವಸತಿ ಕಲ್ಪಿಸಲು ಸಿದ್ದತೆ ನಡೆಸಿದೆ.ದೇವಕಾರ ಗ್ರಾಮ ಭೇಟಿಯಲ್ಲಿ ಕೆ. ಶಂಭು ಶೆಟ್ಟಿ, ಉದಯ ಬಾಂದೇಕರ, ರಾಮಾ ಗೌಡಾ, ಸಚಿನ ಮಹಾಲೆ, ಉಲ್ಲಾಸ ಮಹಾಲೆ, ಆನಂದು ಮಹಾಲೆ ಇತರರಿದ್ದರು.
Leave a Comment