ಹೊನ್ನಾವರ ;
ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಡ್ಕಣಿ ಇವರ ಸಹಕಾರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಗಿನ ಮೂಡ್ಕಣಿ ಉಚಿತ ನೋಟ್ ಬುಕ್ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ, ಅಧ್ಯಕ್ಷÀ ರವಿ ಫರ್ನಾಂಡಿಸ್ ಮಾತನಾಡಿ ಈ ಸಂಸ್ಥೆಯು ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸವನ್ನು ಮಾಡಲಿ ಎಂದು ಹಾರೈಸಿದರು.
ಶಿಕ್ಷಕÀ ಜಿ.ಟಿ.ನಾಯ್ಕ ಮಾತನಾಡಿ ಈ ಸಂಸ್ಥೆಯು ನಿರಂತರವಾಗಿ 5ನೇ ವರ್ಷದ ನೋಟ್ ಬುಕ್ ವಿತರಿಸುತ್ತಿರುವುದಕ್ಕೆ ಅಭಿನಂದಿಸಿದರು
. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವಿನಾಯಕ ನಾಯ್ಕ ನೋಟ್ ಬುಕ್ ವಿತರಿಸಿದರು. ಮುಖ್ಯ ಶಿಕ್ಷಕಿÀ ಮಂಗಲಾ ಕೆ. ಹೆಗಡೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
Leave a Comment