ಕಾರವಾರ:
ಸೋನಾರವಾಡದ ಶಾರದಾ ಮಂದಿರದಲ್ಲಿನ ಶಾಲಾ ಕಟ್ಟಡ ಶಿಥಿಲಗೊಂಡು ಕುಸಿದ ಘಟನೆ ಮಂಗಳವಾರ ನಡೆದಿದೆ.
ಈ ವೇಳೆ ಪಕ್ಕದ ಕೊಠಡಿಯಲ್ಲಿ ಮಕ್ಕಳು ಊಟ ಮಾಡುತ್ತಿದ್ದರು. ಪ್ರಾಥಮಿಕ ಶಾಲೆಯ ಖಾಲಿ ಇರುವ ಎರಡು ಕೋಠಡಿಗಳ ಪೈಕಿ ಒಂದನ್ನು ಅಂಗನವಾಡಿ ನಡೆಸಲು ಅನುಮತಿ ನೀಡಲಾಗಿತ್ತು. ಇನ್ನೊಂದನ್ನು ಹಾಗೆ ಖಾಲಿ ಬಿಡಲಾಗಿತ್ತು. ಖಾಲಿ ಬಿಡಲಾಗಿದ್ದ ಕಟ್ಟಡ ಕುಸಿತ ಕಂಡಿದೆ. ಇದರಿಂದ ಪಕ್ಕದ ಕೋಣೆಗೂ ಅಲ್ಪ ಹಾನಿಯಾಗಿದೆ. ಪಕ್ಕದ ಕೋಣೆಯಲ್ಲಿ ಊಟ ಮಾಡುತ್ತಿದ್ದ 10 ಅಂಗನವಾಡಿ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 2001ರಲ್ಲಿ ಸುಮಾರು 90 ಸಾವಿರ ರೂ ಅನುದಾನದಲ್ಲಿ ನಿರ್ಮಿಸಿದ್ದ ಕಟ್ಟಡ 16 ವರ್ಷದೊಳಗೆ ಮುರಿದು ಬಿದ್ದಿರುವದು ಕಳಪೆ ಕಾಮಗಾರಿಗೆ ಉದಾಹರಣೆ ಎಂದು ಸ್ಥಳೀಯರು ದೂರಿದರು. ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ ಎಂದು ದೂರಿದರು.
Leave a Comment