ಕಾರವಾರ:
ಗುರುವಾರ ನಾಗರ ಪಂಚಮಿ ಹಬ್ಬವನ್ನು ಎಲ್ಲಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಪ್ರಮುಖ ದೇವಸ್ಥಾನಗಳಲ್ಲಿ ನಾಗರಕಲ್ಲುಗಳಿಗೆ ಹಾಲೇರದು ವಿಶೇಷ ಪೂಜೆ ಸಲ್ಲಿಸಿದರು. ಕಾರವಾರದ ಸುಂಕೇರಿ ನಾಗನಾಥ ದೇವಸ್ಥಾನ, ನಗರದ ನಾಗಕಟ್ಟೆ, ಕಠಿಣಕೋಣ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಯೇ ಭಕ್ತರು ಸರದಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀನಾಗನಾಥ ದೇವಸ್ಥಾನ, ಕಠಿಣಕೋಣ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ವಿಶೇಷ ಪೂಜೆ, ಹರಕೆ ಸಲ್ಲಿಸಿದರು. ಅಲ್ಲದೆ ನಾಗರ ಕಲ್ಲುಗಳಿಗೆ ಹಾಲುಗಳ ಅಭಿಷೇಕ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜನರು ಸಾಲಿನಲ್ಲಿ ನಿಲ್ಲುವಂತೆ ಹಾಗೂ ಹಣ್ಣುಕಾಯಿ ಸಮರ್ಪಿಸಲು ಕೌಂಟರ್ ಮಾಡಲಾಗಿತ್ತು. ಇನ್ನೂ ಹರಕೆ ಹಾಗೂ ಇನ್ನಿತರ ವಿಶೇಷ ಪೂಜೆ ಸಲ್ಲಿಸುವ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಇಲ್ಲಿ ಭಕ್ತರು ಸಂಜೆವರೆಗೂ ಬಂದು ಪೂಜೆ ಸಲ್ಲಿಸುತ್ತಿದ್ದರು. ಸುಂಕೇರಿ, ಕಡವಾಡ, ಸದಾಶಿವಗಡ, ಬಿಣಗಾ, ಅರಗಾ, ಅಮದಳ್ಳಿ, ಶೇಜವಾಡ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಇರುವ ನಾಗ ದೇವರ ಮೂರ್ತಿಗಳಿಗೆ ಭಕ್ತರು ಹಾಲೆರದು ಪೂಜೆ ಸಲ್ಲಿಸಿದರು.
ಮಹಿಳೆಯರು ಪಂಚಮಿ ನಿಮಿತ್ತ ವಿವಿಧ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿ ದೇವರಿಗೆ ಸಮರ್ಪಿಸಿದರು. ನಾಗರ ಪಂಚಮಿ ದಿನ ಈ ಭಾಗದ ವಿಶೇಷ ಖಾದ್ಯಗಳಲ್ಲಿ ಒಂದಾದ ಪಾತೋಳಿಯನ್ನು ತಯಾರಿಸಿ ಜನರು ಸವಿದರು. ನಗರದ ನಾಗ ದೇವಾಲಯಗಳಲ್ಲಿ ಸಂಜೆವರೆಗೂ ದೇವರ ದರ್ಶನವನ್ನು ಜನರು ಪಡೆದುಕೊಂಡರು.
Leave a Comment