ಕಾರವಾರ:
ಪೊಲೀಸ್ ಇಲಾಖೆಯ ಗೌರವ ಸಂಕೇತವಾದ ಪೊಲೀಸ್ ಸಿಬ್ಬಂದಿ ಬಳಸುವ ಹತ್ತಾರು ಟೋಪಿಗಳು ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.
ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪೊಲೀಸ್ ಅಪರಾಧ ವಿಭಾಗದ ಕಚೇರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇಲಾಖೆಗೆ ಸಂಬಂಧಿಸಿದ ಕಾಗದಪತ್ರಗಳ ಜೊತೆ ಇಲಾಖೆಯ ಗೌರವ ಸಂಕೇತವಾದ ಟೋಪಿ ಇನ್ನಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಲಾಗುತ್ತಿದೆ. ಅರೆಬರೆಯಾಗಿ ತೆರವುಗೊಳಿಸಲಾದ ಕಚೇರಿಯ ಒಳ ಹಾಗೂ ಹೊರಭಾಗದಲ್ಲಿ ಪೊಲೀಸರು ಬಳಸುವ ಸಮವಸ್ತ್ರ, ಗುರುತಿನ ಚೀಟಿ, ಬೂಟು ಇನ್ನಿತರ ವಸ್ತುಗಳು ಶಿಥಿಲಾವ್ಯವಸ್ಥೆಯಲ್ಲಿ ಕಾಣಸಿಗುತ್ತಿವೆ. ಟೋಪಿಗಳಿಗೆ ಸಂಖ್ಯೆ ಇರುವದನ್ನು ಗಮನಿಸಬಹುದಾಗಿದೆ. ಕಚೇರಿಯನ್ನು ತೆರವುಗೊಳಿಸುವ ಗುತ್ತಿಗೆ ಪಡೆದವರೂ ಇಲಾಖೆಯ ವಸ್ತುಗಳ ಕುರಿತು ಯಾವದೇ ಗಮನ ಹರಿಸಿಲ್ಲ. ಶಿಸ್ತಿನ ಇಲಾಖೆ ಎಂದು ಹೆಸರು ಪಡೆದಿರುವ ಪೊಲೀಸ್ ಇಲಾಖೆ ಕೂಡ ತನ್ನ ಸುಪರ್ಧಿಯಲ್ಲಿರುವ ವಸ್ತುಗಳನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇವೆಲ್ಲವೂ ನಿರುಪಯೋಗಿ ವಸ್ತುಗಳು ಎಂದಾದರೂ ಅದನ್ನು ಸೂಕ್ತ ರೀತಿಯಲ್ಲಿ ವಿಲೆವಾರಿ ಮಾಡಬಹುದಾಗಿತ್ತು. ಬದಲಾಗಿ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಚೆಲ್ಲಿರುವದು ಆಕ್ಷೇಪಕ್ಕೆ ಕಾರಣವಾಗಿದೆ.
Leave a Comment