ಕಾರವಾರ:
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲತೆ ಪ್ರಮಾಣ ಶೇ.75%ಕ್ಕಿಂತ ಮೇಲ್ಪಟ್ಟ ವಿಕಲಚೇತನರಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಮಂಜೂರಾತಿಗಾಗಿ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟಂಬರ್ 14 ಕೊನೆಯ ದಿನವಾಗಿರುತ್ತದೆ. ಅಗತ್ಯ ದಾಖಲಾತಿಗಳೊಂದಿಗೆ ಇಲಾಖೆಯ ವೆಬ್ ಸೈಟ್ http://www.welfareofdisabled.kar.nic.in ಮೂಲಕ ಅರ್ಜಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ದೂರವಾಣಿ ಸಂಖ್ಯೆ 08382-221914 ಸಂಪರ್ಕಿಸಬಹುದಾಗಿದೆ.
Leave a Comment