ಕಾರವಾರ:
ಜಿಲ್ಲಾಧಿಕಾರಿ ಕಚೇರಿ ಕಾನೂನು ಕೋಶದಲ್ಲಿ ಖಾಲಿ ಇರುವ ಇಂಗ್ಲಿಷ್ ಟೈಪಿಂಗ್ನ ಒಂದು ಹುದ್ದೆಗೆ ನೂರಾರು ಮಂದಿ ಸ್ಪರ್ಧಿಸಿದರು. ಸೋಮವಾರ ನಡೆದ ಸಂದರ್ಶನದಲ್ಲಿ ಜಿಲ್ಲೆಯ ಬೇರೆ ಬೇರೆ ಭಾಗದ ಅಭ್ಯರ್ಥಿಗಳು ಭಾಗವಹಿಸಿದ್ದರು.
ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಹಾಜರಾಗಿದ್ದರಿಂದ 11 ಅಭ್ಯರ್ಥಿಗಳ ಗುಂಪು ರಚಿಸಿದ ಅಧಿಕಾರಿಗಳು, ವಿವಿಧ ವಿಭಾಗದ ಕಂಪ್ಯುಟರ್ಗಳನ್ನು ನೀಡಿ ಟೈಪಿಂಗ್ ನಡೆಸುವ ಮೂಲಕ ಸಂದರ್ಶನ ಮಾಡಿದರು. ಮಹಿಳಾ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಯ್ಕೆಯಾದ ಅಭ್ಯರ್ಥಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುವ ಸಂಸ್ಥೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಮಾಸಿಕ 17,542ರೂ ಗೌರವ ಧನ ನೀಡಲಾಗುತ್ತದೆ.
Leave a Comment