• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾಮಾಜಿಕ ತಾಣಗಳಲ್ಲಿ ರಾಜಕೀಯ ಬಿಸಿ ;ಅಭ್ಯರ್ಥಿ ಆಕಾಂಕ್ಷಿಗಳಿಂದ ಕಸರತ್ತು

August 8, 2017 by Sachin Hegde Leave a Comment

ಕಾರವಾರ: ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರಾಜಕೀಯ ಪ್ರಮುಖರು ಸಕ್ರಿಯರಾಗಿದ್ದಾರೆ.
ರಾಜಕೀಯ ರಾಷ್ಟ್ರೀಯ ಮುಖಂಡರನ್ನು ಪ್ರೇರಣೆಯಾಗಿ ಪಡೆದುಕೊಂಡು 2018ರ ವಿಧಾನಸಭೆ ಚುನಾವಣೆಗಳ ಪೂರ್ವ ಸಿದ್ದತೆಗಳನ್ನು ನಡೆಸಿಕೊಳ್ಳಲು ಸ್ಥಳೀಯ ನಾಯಕರು ಸಿದ್ದತೆ ನಡೆಸುತ್ತಿದ್ದಾರೆ. ವಿವಿಧ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಪೂರ್ಣ ಪ್ರಚಾರಕ್ಕಾಗಿ ಬಳಸುತ್ತಿದ್ದಾರೆ. ಪಕ್ಷದ ವತಿಯಿಂದ ನಡೆಯುವ ಕಾರ್ಯ ಚಟುವಟಿಕೆ, ಸಭೆ, ಸಮಾರಂಭಗಳು ನಡೆದ ಸಂದರ್ಭದಲ್ಲಿ ಆಯಾ ಮುಖಂಡರು ತಮ್ಮನ್ನು ತಾವೇ ಪ್ರಶಂಸೆ ಮಾಡಿಕೊಂಡು ತಮ್ಮದೆ ಭಾವಚಿತ್ರ, ತಮ್ಮದೇ ಭಾಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಎಂಎಲ್‍ಎ, ಈ ಹಿಂದೆ ಸೋತ ಅಭ್ಯರ್ಥಿಗಳು ಹಾಗೂ ಹೊಸ ಆಶಾಭಾವಣೆಗಳನ್ನು ಹೊತ್ತ ಟಿಕೆಟ್ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳನ್ನು ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಿದ್ದಾರೆ.
ಕೆಲ ಪಕ್ಷದ ಮುಖಂಡರು ತಮ್ಮಗೇ ಟಿಕೆಟ್ ಲಭಿಸಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದು ತಮ್ಮದೇ ಹೆಸರಿನಲ್ಲಿ ಪೇಸ್‍ಬುಕ್‍ಳಲ್ಲಿ ಹಲವಾರು ಐಡಿ ಹಾಗೂ ಪೇಸ್‍ಬುಕ್‍ಗಳಲ್ಲಿ ತಮ್ಮ ಪೇಜ್ ಮಾಡಿಕೊಂಡಿದ್ದಾರೆ. ಚುನಾವಣೆಗಳು ಹತ್ತಿವಾಗುತ್ತಿದ್ದಂತೆ ಆಯಾ ಮುಖಂಡರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದ್ದು ತಮ್ಮ ರಾಜಕೀಯ ಮುಖಂಡರನ್ನು ಖುಷಿ ಪಡಿಸಲು ವಾಟ್ಸ್‍ಆಪ್ ಗ್ರೂಪ್, ಪೇಸ್‍ಬುಕ್ ಪೆಜ್‍ಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರದಲ್ಲಿ ಇದೊಂದು ಹೊಸ ಟ್ರೆಂಡ್ ಪ್ರಾರಂಗೊಂಡಿದೆ. ಹಾಲಿ ಮುಖಂಡರ ಜೊತೆಗೆ ಅವರಿಗೆ ಪೈಟೋಟಿ ನೀಡಲು ತಾವು ಯಾವುದರಲ್ಲೂ ಹಿಂದಿಲ್ಲ ಎನ್ನುವ ನಿಟ್ಟಿನಲ್ಲಿ ಹೊಸಬರು ಸ್ಪರ್ಧೆಗೆ ಇಳಿದಿದ್ದಾರೆ. ಅಲ್ಲದೆ ಜಿಲ್ಲೆಯ ಆಯಾ ಭಾಗದಲ್ಲಿ ಕೆಲವು ಪಕ್ಷ, ಸಂಘಟನೆಗಳಲ್ಲಿ ಗುರುತಿಸಿಕೊಂಡರುವ ಸಹ ತಮಗೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ರಾಜಕೀಯ ನಾಯಕರು ತಾಂತ್ರಿಕವಾಗಿ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೆಲವು ಯುವಕರನ್ನು ನೇಮಿಸಿಕೊಂಡಿದ್ದಾರೆ. ಯುವಕರ ಕೈಗೆ ಸ್ಮಾರ್ಟ್ ಫೋನುಗಳನ್ನು ನೀಡುವ ನಾಯಕರು, ಯುವಕರು ತಮ್ಮ ನಾಯಕರ ಅಭಿಮಾನಿಗಳ ಬಳಗದ ಹೆಸರಿನಲ್ಲಿ ಕ್ಲಬ್ ಹೆಸರಿನಲ್ಲಿ ಅನೇಕ ಗುಂಪುಗಳನ್ನು ರಚಿಸಿದ್ದಾರೆ. ಈ ಯುವಕರಿಗೆ ಸಾಮಾಜಿಕ ಜಾಲತಾಣಗಳನ್ನು ತಮ್ಮ ನಾಯಕರ ರಾಜಕೀಯ ಚಟುವಟಿಕೆಗಳನ್ನು ಮಾಡಿದ ಭಾಷಣ, ಟೀಕೆಗಳನ್ನೇ ಪ್ರದರ್ಶಿಸಬೇಕು. ಪೇಸ್‍ಬುಕ್‍ಗಳ ಜೊತೆಗೆ ವಾಟ್ಸ್‍ಆಪ್‍ಗಳಲ್ಲು ಗುಂಪುಗಳನ್ನು ರಚಿಸಿ ಈ ಬಾರಿಯ ಟಿಕೆಟ್ ತಮ್ಮ ನಾಯಕರಿಗೇ ಎನ್ನುವ ರೀತಿಯ ಮಾಹಿತಿಗಳನ್ನು ಹರಿದು ಬಿಡಲಾಗುತ್ತಿದೆ. ಅಂಥ ಗುಂಪುಗಳಿಗೆ ಸಾಮಾನ್ಯ ಜನರಿಗೂ ಸೇರಿಸಲಾಗುತ್ತಿದ್ದು ರಾಜಕೀಯ ನಾಯಕರ ನಿರೀಕ್ಷೆಗೂ ಮೀರಿ ಬರುವ ಸಂದೇಶಗಳು, ಚಿತ್ರಗಳು ಜನರಿಗೆ ಕಿರಿಕಿರಿ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News, Karwar News, Trending Tagged With: ಅಭಿಮಾನಿಗಳ, ಅಭ್ಯರ್ಥಿ, ಆಕಾಂಕ್ಷಿಗಳಿಂದ, ಕಸರತ್ತು, ಗ್ರೂಪ್, ಚುನಾವಣೆ, ತಮ್ಮ, ತಾಣ, ಪೇಜ್, ಪೇಸ್‍ಬುಕ್‍, ಪ್ರಮುಖರು, ಬಿಸಿ, ರಾಜಕೀಯ, ವಾಟ್ಸ್‍ಆಪ್, ವಿಧಾನಸಭೆ, ಸಂಖ್ಯೆ, ಸಾಮಾಜಿಕ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,035 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar