ಹೊನ್ನಾವರ:
‘ಅರಣ್ಯ ಎನ್ನುವುದು ಇಡೀ ಜೀವ ಸಂಕುಲದ ಸಾಮೂಹಿಕ ಆಸ್ತಿಯಾಗಿದ್ದು ಇದರ ರಕ್ಷಣೆ ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಎನ್ಎಸ್ಎಸ್,ಯೂಥ್ ರೆಡ್ ಕ್ರಾಸ್ ಘಟಕ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಆಶ್ರಯದಲ್ಲಿ ಹೆರಾವಲಿ ಗ್ರಾಮದ ಕಾಮಕೋಡ ದೇವರಕಾಡಿನ ವ್ಯಾಪ್ತಿಯ ಶ್ರೀ ದೇವಿ ದುರ್ಗಮ್ಮ ದೇವಸ್ಥಾನದ ಆವಾರದಲ್ಲಿ ಶುಕ್ರವಾರ ನಡೆದ ಸ್ವಚ್ಛತೆ ಹಾಗೂ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ನಿತ್ಯ ಹರಿದ್ವರ್ಣದ ಕಾಡುಗಳು ನಾಶವಾಗುತ್ತಿದ್ದು ಪ್ರಾಕೃತಿಕ ಸೊಬಗಿನ ಕಾಮಕೋಡ ಸಂರಕ್ಷಿತ ಕಾಡನ್ನು ಜತನದಿಂದ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಎಂದು ಹೇಳಿದರು.
ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಮಾತನಾಡಿ,”ಸ್ಥಳದ ಇತಿಹಾಸ,ಧಾರ್ಮಿಕ ವಿಶೇಷತೆಯ ಬಗ್ಗೆ ತಿಳಿದುಕೊಳ್ಳಬೇಕು.ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳುವ ಜೊತೆಗೆ ವಿದ್ಯಾರ್ಥಿಗಳು ಜೀವನಾನುಭವವನ್ನು ಸಂಪಾದಿಸಬೇಕು’ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ಪಿಸಿ,ಪಿ.ಎಸ್.ಗೊಂಡ,ಪ್ರೊ.ಸಂಜೀವ ನಾಯಕ,ಪ್ರೊ.ಸುರೇಶ ಎಸ್.,ಉಪ ವಲಯ ಅರಣ್ಯಾಧಿಕಾರಿಗಳಾದ ವಿ.ಎಚ್.ನಾಯ್ಕ,ವಿನೋದ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರೊ.ಎಂ.ಜಿ.ಹೆಗಡೆ ವಂದಿಸಿದರು.
Leave a Comment