ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗೆ ರಾಖಿಯನ್ನು ಕಟ್ಟುವುದರ ಮೂಲಕ ಈಶ್ವರೀಯ ವಿಶ್ವವಿದ್ಯಾಲಯದವರು ರಕ್ಷಾಬಂಧನ ಹಬ್ಬ ಆಚರಿಸಿದರು.
ಈ ವೇಳೆ ಮಾತನಾಡಿದ ಈಶ್ವರೀಯ ವಿಶ್ವವಿದ್ಯಾಲಯದ ಕಾರವಾರ ಘಟಕದ ಪ್ರಮುಖರಾದ ವಿಮಲಾ, ಎಲ್ಲರೂ ಜಾತ್ಯಾತೀತ ಮನೋಭಾವದಿಂದ ಸಹೋದರರಂತೆ ಬಾಳಬೇಕು. ಹಿಂಸೆ, ಅಧರ್ಮದ ಕಡೆಗೆ ವಾಲದೇ ಪ್ರಾಮಾಣಿಕವಾಗಿ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು. ನಗರಸಭಾ ಸದಸ್ಯೆ ಛಾಯಾ ಜಾವಕರ, ಜಿಲ್ಲಾ ಕಾರಾಗೃಹದ ಪ್ರಧಾನ ವೀಕ್ಷಕರಾದ ಗುರುರಾಜ್ ಎನ್. ಹುಯಿಲಗೋಳ ಇದ್ದರು. ಶಿಕ್ಷಕ ರಾಘವೇಂದ್ರ ಶಾನಭಾಗ ಸ್ವಾಗತಿಸಿದರು.
Leave a Comment