ಕಾರವಾರ:
ನಗರದಲ್ಲಿ ಆರ್ಟ ಆಫ್ ಲಿವಿಂಗ್ ವತಿಯಿಂದ ಜೀವನ ಕಲೆ ಸುದರ್ಶನ ಕ್ರಿಯಾ ಶಿಬಿರ ನಡೆಯಿತು.
ಗ್ರೀನ್ಸ್ಟೀಟ್ ರಸ್ತೆಯಲ್ಲಿರುವ ದತ್ತ ಪ್ರಸಾದ ಕಾಂಪ್ಲೇಕ್ಸನ ವ್ಯಕ್ತಿತ್ವ ವಿಕಸನ ಕೇಂದ್ರದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಆರ್ಟ ಆಫ್ ಲಿವಿಂಗ್ನ ಶಿಕ್ಷಕ ಸುನೀಲ ಹಾರ್ವೇ ಶಿಬಿರ ನಡೆಸಿಕೊಟ್ಟರು. ತರಭೇತಿ ವೇಳೆ ಮಾತನಾಡಿದ ಅವರು, ಉಸಿರಾಟದ ವಿಧಾನ ಹಾಗೂ ಆರೋಗ್ಯಕರ ಜೀವನಕ್ಕಾಗಿ ರೂಡಿಸಿಕೊಳ್ಳಬೇಕಾದ ಜೀವನಶೈಲಿಗಳನ್ನು ಪರಿಚಯಿಸಿದರು. 30ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ಗಣೇಶ್ ಆಚಾರ್ಯ, ಬಿ.ಎಸ್ ಪೈ ಇತರರು ಶಿಬಿರ ಸಂಘಟಿಸಿದ್ದರು.
Leave a Comment