ಕಾರವಾರ: ಭಾಷಾ ಪ್ರಾವಿಣ್ಯತೆ, ಕೌಶಲಾಭಿವೃದ್ದಿಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಕರೆ ನೀಡಿದರು.
ಭಾನುವಾರ ದೇವರಾಜ ಅರಸು 102ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಅಧಗಯಕ್ಷತೆ ವಹಿಸಿ ಅವರು ಮಾತನಾಡಿದರು.
ಸತತ ಪರಿಶ್ರಮದಿಂದ ಶ್ರದ್ದೆ, ನಿಷ್ಟೆ, ಛಲವನ್ನು ಹೊಂದಿ ಜೀವನ ಶೈಲಿಯನ್ನು ಉತ್ತಮವಾಗಿ ರೂಪಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾದ್ಯ. ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸೀಮಿತವಾಗಿರದೇ ಭಾಷಣ, ಕ್ರೀಡೆ ಮೊದಲಾದ ಚಟುವಟಿಕೆಗಳ ಮೂಲಕ ಸಂಪೂರ್ಣ ವ್ಯಕ್ತಿತ್ವ ವಿಕಸನಗೊಳಿಸಬೇಕು. ಮಾಜಿ ಮುಖ್ಯಮಂತ್ರಿ ದಿವಂಗತ್ ಡಿ.ದೇವರಾಜ ಅರಸು ಅವರಲ್ಲಿನ ವ್ಯಕ್ತಿತ್ವವನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಉಪಾಧ್ಯಕ್ಷೆ ಲಿಲಾಬಾಯಿ ರಾಣೆಕರ, ಮಾಜಿ ಮುಖ್ಯಮಂತ್ರಿ ದಿವಂಗತ್ ಡಿ.ದೇವರಾಜ ಅರಸು ಅವರು ಬಡವರಿಗೆ ವಿದ್ಯುತ್ ಸಂಪರ್ಕ, ಜೀತ ವಿಮುಕ್ತಿಗಳಂತಹ ಸಮಾಜಮುಖಿ ಯೋಜನೆಗಳ ಮೂಲಕ ಹಿಂದುಳಿದವರನ್ನು ಕತ್ತಲೆಯಿಂದ ಬೆಳಕಿನಡೆಗೆ ತಂದವರು ಎಂದರು. ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಹರಿಕಾರರಾಗಿದ್ದ ಅರಸು ಅವರು ತಳೆದ ದಿಟ್ಟ ನಿಲುವುಗಳು ಭವಿಷ್ಯದ ಜನಾಂಗವನ್ನೇ ಬದಲಾಯಿಸಿದವು. ದುರ್ಬಲ ವರ್ಗದವರಲ್ಲಿ ಸ್ವಾವಲಂಬನೆ ಹುಟ್ಟಿಸಿ ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಿದವರು ಎಂದು ಸ್ಮರಿಸಿದರು.
ವಿಶೇಷ ಉಪನ್ಯಾಸ ನೀಡಿದ ಮಲ್ಲಿಕಾರ್ಜುನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಿ. ಮನೋಜ, ಅರಸು ಅವರು ಎಲ್ಲಿಯವರೆಗೆ ಸಮಾನತೆ ಸಾಧಿಸುವದಿಲ್ಲವೋ ಅಲ್ಲಿಯವರೆಗೆ ಸುಧಾರಣೆ ಸಾದ್ಯವಿಲ್ಲ ಎಂದು ತಿಳಿದವರಾಗಿದ್ದರು. ಅಧಿಕಾರದೊಂದಿಗೆ ಮಾನವಿಯತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಮೈಗೂಡಿಸಿಕೊಂಡವರಾಗಿದ್ದರು. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆ ನೀಡಿ ಜೀತ ವಿಮುಕ್ತಿಯನ್ನು ಜಾರಿಗೆ ತಂದರು ಎಂದು ವಿವರಿಸಿದರು.
* ಪ್ರತಿಭಾ ಪುರಸ್ಕಾರ
2016-17ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ರ್ಯಾರ್ಥಿನಿಲಯಗಳಲ್ಲಿದ್ದು ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಯಿತು. ಎಸ್.ಎಸ್.ಎಲ್.ಸಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶಿರಸಿ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯದ ಪ್ರಸನ್ನ ಗಣಪತಿ ನಾಯ್ಕ, ದ್ವೀತಿಯ ಸ್ಥಾನ ಪಡೆದ ಯಲ್ಲಾಪುರ ಮಂಚಿಕೇರಿ ಮೆ.ಪೂ.ಬಾಲಕರ ನಿಲಯದ ಅರುಣಕುಮಾರ ವಾಲಿಕರ, ತೃತಿಯ ಸ್ಥಾನ ಪಡೆದ ಶಿರಸಿ ಸಾಲ್ಕಣಿ ಮೆ.ಪೂ.ಬಾಲಕರ ವಸತಿ ನಿಲಯದ ಚಂದ್ರಶೇಖರ ಗೌಡ ಬಹುಮಾನ ಸ್ವೀಕರಿಸಿದರು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸುಶೀಲಾ ಆರ್. ಪಟಗಾರ ಕುಮಟಾ, ದ್ವೀತಿಯ ಗೀತಾಂಜಲಿ ಎಸ್.ಪೂಜಾರಿ ಮುಂಡಗೋಡ, ತೃತಿಯ ಸಹನಾ ಪಾಟೀಲ ಮುಂಡಗೋಡ ಬಹುಮಾನ ಪಡೆದರು. ಪಿ.ಯು.ಸಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಸಂತೋಷ ಎಸ್.ಲಮಬೋರೆ ಕಾರವಾರ, ದ್ವೀತಿಯ ಚಿದಾನಂದ ಭಿಡಕರ ದಾಂಡೇಲಿ, ತೃತಿಯ ಗಂಗಾರಾಮ ಕರಾರೆ ಕಾರವಾರ, ಬಾಲಕಿಯರ ವಿಭಾಗದಲ್ಲಿ, ಪ್ರಥಮ ಸ್ಥಾನ ರನ್ಯಾ ರಾಮಚಂದ್ರ ನಾಯ್ಕ ಹೊನ್ನಾವರ, ದ್ವೀತಿಯ ಪವಿತ್ರಾ ಎಂ.ನಾಯ್ಕ ಶಿರಸಿ, ತೃತಿಯ ಯಶೋದ ಆರ್. ಮೋಗೇರ ಕುಮಟಾ ಪಡೆದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಪೋಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ, ಪ್ರೋಬೇಶನರಿ ಐ.ಎ.ಎಸ್. ಅಧಿಕಾರಿ ಡಾ.ಕೆ. ಆನಂದ, ಎ.ಸಿ. ಶಿವಾನಂದ ಕರಾಳೆ,ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು.
Leave a Comment