ಕಾರವಾರ: ಕರ್ನಾಟಕ ಮಾದ್ಯಮ ಅಕಾಡೆಮಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗದ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀದರರಿಂದ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಆಗಸ್ಟ 31 ಕೊನೆಯ ದಿನವಾಗಿರುತ್ತದೆ. ತರಬೇತಿ ವೇಳೆಯಲ್ಲಿ 10 ತಿಂಗಳು ಕಾಲ 10 ಸಾವಿರ ಗೌರವಧನ ನೀಡಲಾಗುವದು. ಅರ್ಜಿ ಸಲ್ಲಿಸುವರು ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಂವಹನ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ 28 ವರ್ಷ ಒಳಗಿನವರಾಗಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಸ್ವವಿವರ, ವಿದ್ಯಾರ್ಹತೆ ಪತ್ರಗಳು, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಛಾಯಾಚಿತ್ರಗಳನ್ನು ಸ್ಕಾನ್ ಮಾಡಿ [email protected] <mailto:[email protected]> ಮೂಲಕ ಅಥವಾ ಅಂಚೆ ಮೂಲಕ ಸಲ್ಲಿಸತಕ್ಕದ್ದು. ಈ ಹಿಂದ ಅರ್ಜಿ ಸಲ್ಲಿಸಿರುವಂತಹವರು ಪುನ; ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment