ಭಟ್ಕಳ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ಧಾಣ ಹಾಗೂ ಡಿಪೋ ಎದುರಿಗೆ ದೊಡ್ಡ ಹೊಂಡವಾಗಿ ನೀರು ತುಂಬಿಕೊಂಡಿದ್ದು ಹೆದ್ದಾರಿ ಇಲಾಖೆಯಾಗಲೀ, ಕೆ.ಎಸ್.ಆರ್.ಟಿ.ಸಿ.ಯಾಗಲೀ, ಪುರಸಭೆಯಾಗಲೀ ಈ ಕುರಿತು ಗಮನ ಹರಿಸಿಲ್ಲ. ದಿನ ನಿತ್ಯ ನೂರಾರು ಬಸ್ಸುಗಳು ಓಡಾಡುವಾಗ ಹಲವು ಬಾರಿ ಬಸ್ಸಿನ ತಳಭಾಗ ತಾಗುತ್ತಿದ್ದರೂ ಕ್ರಮ ಮಾತ್ರ ಎಕಿಲ್ಲ ಎನ್ನುವುದು ನಾಗರೀಕರ ಪ್ರಶ್ನೆಯಾಗಿದೆ. ಜನರೂ ಕೂಡಾ ಈ ಭಾಗದಲ್ಲಿ ಸಂಚರಿಸುವಾಗ ಜಾಗೃತೆ ವಹಿಸಬೇಕಾಗಿದ್ದು ಸ್ವಲ್ಪ ಯಾಮಾರಿದರೂ ಕೆಂಪು ನೀರಿನ ಸ್ನಾನ ಗ್ಯಾರೆಂಟಿ.
Leave a Comment