ಹೊನ್ನಾವg ತಾಲೂಕಿನ ಕಡತೋಕದ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಗಳು ಸಾಧನೆಗೈಯುವಂತೆ ಪ್ರೋತ್ಸಾಹ ಹಾಗೂ ಪ್ರೇರಣೆಗಳನ್ನು ನೀಡುತ್ತವೆ. ಆ ನಿಟ್ಟಿನಲ್ಲಿ ಸಾಧಕರನ್ನು ಪ್ರೋತ್ಸಾಹಿಸಿ ಇತರೇ ವಿದ್ಯಾರ್ಥಿಗಳನ್ನು ಸಾಧನೆಗೈಯುವಂತೆ ಹುರಿದುಂಬಿಸುವುದು ಈ ಕಾರ್ಯಕ್ರಮದಉದ್ದೇಶವಾಗಿದೆ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಪರಿಪೂರ್ಣರಾಗುವುದರೊಂದಿಗೆ ವ್ಯಕ್ತಿತ್ವ ವಿಕಸನವಾಗುತ್ತದೆಎಂದು ನುಡಿದುಕೇಂದ್ರ ಸರಕಾರದಜನಪರ ಯೋಜನೆಗಳಾದ ಉಜ್ವಲ ಹಾಗೂ ವಿಮಾ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ ನಾಗರಾಜ ನಾಯಕತೊರ್ಕೆಯವರು ಪಕ್ಷಾತೀತ ನಾಯಕರು.ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎಲ್ಲರಿಗೂಆದರ್ಶಪ್ರಾಯರಾಗಿದ್ದಾರೆ.ನಮ್ಮಿಬ್ಬರ ಪಕ್ಷ ಬೇರೆಯಾಗಿದ್ದರೂಕೂಡಾತಾನು ನಾಗರಾಜ ನಾಯಕತೊರ್ಕೆಯವರಕಾರ್ಯವನ್ನು ಶ್ಲಾಘಿಸುತ್ತೇನೆ. ಜನಪರ ಕಾರ್ಯಗಳನ್ನು ಯಾರೇ ಮಾಡಿದರೂಅದನ್ನುಅಭಿನಂದಿಸುವುದುತನ್ನಕರ್ತವ್ಯಎಂದುರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಮಿತಿಯಅಧ್ಯಕ್ಷರಾದ ಪ್ರೊ|| ಶಂಭು ಭಟ್ಟ, ಪ್ರಾಂಶುಪಾಲರಾದದುರ್ಗಮ್ಮ ಪಿ.ಎಚ್., ಮುಖ್ಯಾಧ್ಯಾಪಕರಾದ ಉಷಾ ಜಿ. ಭಟ್ಟಇವರನ್ನು ಸನ್ಮಾನಿಸುವುದರೊಂದಿಗೆ ಎಸ್.ಎಸ್.ಎಲ್.ಸಿ. ಯಲ್ಲಿ ಸಾಧನೆಗೈದರವಿ ಹೆಗಡೆ, ಎಮ್.ಡಿ.ದಿಶಾ ಮತ್ತು ಪಿಯುಸಿಯಲ್ಲಿ ಸಾಧನೆಗೈದಗಣೇಶ ಮಡಿವಾಳ, ಸೌಮ್ಯ ನಾಯ್ಕಇವರನ್ನುಕಾಣಿಕೆ ನೀಡಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿಎಮ್.ಎಸ್. ಹೆಗಡೆ, ಆಯ್. ವಿ. ಜೋಶಿ, ಅನುಪಮ ಮಡಿವಾಳ, ಮಹಾಬಲೇಶ್ವರ ಮಡಿವಾಳ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದದುರ್ಗಮ್ಮ ಪಿ.ಎಚ್. ಸ್ವಾಗತಿಸಿದರು.ಶೀಲಾ ಮೇಸ್ತ ನಿರೂಪಿಸಿದರು.ಮುಖ್ಯಾಧ್ಯಾಪಕರಾದ ಉಷಾ ಜಿ. ಭಟ್ಟ ವಂದಿಸಿದರು.
Leave a Comment