• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಡಾ. ಎಂ.ಎಂ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿ ನಾಪತ್ತೆಯಾದ ಹಂತಕರನ್ನು ಬಂಧಿಸುವಲ್ಲಿ ವಿಳಂಬ

September 1, 2017 by Sachin Hegde Leave a Comment

ಕಾರವಾರ:

ಸರ್ವಸಮಾನತೆ ಬಯಸಿದ ಡಾ. ಎಂ.ಎಂ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿ ನಾಪತ್ತೆಯಾದ ಹಂತಕರನ್ನು ಬಂಧಿಸುವಲ್ಲಿ ವಿಳಂಬ ಧೋರಣೆ ಅನುರಿಸುತ್ತಿರುವುದು ವಿದ್ವತ್ ವಲಯಕ್ಕೆ ಆಘಾತಕಾರಿ ಎಂದು ಡಾ. ಕಲಬುರ್ಗಿ ಅವರ ವಿದ್ಯಾರ್ಥಿ ಪ್ರೊ. ಶ್ರೀಧರ ನಾಯಕ ಹತ್ಯೆಯನ್ನು ಖಂಡಿಸಿದರು.
ನಾಡೋಜ ಡಾ. ಎಂ.ಎಂ. ಕಲ್ಬುರ್ಗಿ ಅವರ ನೆನಪಿನ ಅಂಗವಾಗಿ ನಗರದಲ್ಲಿ ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ, ಸಿಐಟಿಯು, ಎಸ್.ಎಫ್.ಐ ಮತ್ತು ಸಮಾನ ಮನಸ್ಕ ಸ್ನೇಹಿತರು ನಡೆಸಿದ ವಿಚಾರದಾರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
115 ಕ್ಕೂ ಹೆಚ್ಚು ಪುಸ್ತಕಗಳನ್ನು ಸಹಸ್ರಾರು ವಿಚಾರ ಪ್ರಚೋದಕ ಭಾಷಣಗಳನ್ನು ನೂರಾರು ಸಂಶೋಧನಾ ಪ್ರಬಂಧಗಳನ್ನು ಹಾಗೂ ಉತ್ತಮ ಸಂಶೋಧನಾ ವಿದ್ಯಾರ್ಥಿ ಸಮೂಹವನ್ನು ನಾಡಿಗೆ ಅರ್ಪಿಸಿದ ಡಾ. ಕಲಬುರ್ಗಿಯವರು ಧರ್ಮಾಂಧತೆ ಅಂಧಶ್ರದ್ಧೆ ಸಹಿಸುತ್ತಿರಲಿಲ್ಲ. ನಾಡಿನಾದ್ಯಂತ ಜಾಗೃತಿಗೆ ಮುಂದಾದ ಇವರು ಲಿಂಗಾಯತ ಸ್ವತಂತ್ರ ಧರ್ಮ ಎಂಬುದನ್ನು ಆಧಾರ ಸಹಿತ ಪ್ರತಿಪಾದಿಸಿದ್ದರು. ಅಂತವರನ್ನು ಹತ್ಯೆ ಮಡಿದ ಹಂತಕರನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ ಎಂದರು.
ಪ್ರೊ. ಜಿ.ಡಿ. ಮನೋಜ್ ಮಾತನಾಡಿ, ನಿರ್ಮಲ ಮನಸ್ಸೇ ಮಡಿ, ಉಳಿದಿದ್ದೆಲ್ಲ ಕಾಲ್ಮಡಿ ಎಂದು ಹೇಳಿದ ಕಲಬುರಗಿ ಯವರ ಬದುಕು ಬರಹ ಜೀವನ ಒಂದೇ ತೆರನಾಗಿತ್ತು. ಶ್ರಮಿಕರ ದೇಶ ಶ್ರಮದಲ್ಲಿಯೇ ಪಾವಿತ್ರ್ಯ ಕಂಡ ದೇಶದಲ್ಲಿ ಸತ್ಯ ಹೇಳಿದವರು ಹತ್ಯೆಗೀಡಾಗುತ್ತಾರೆ. ಆದರೆ ಮನುಷ್ಯ ಧರ್ಮದ ಚಿಂತಕರಾದ ಇವರನ್ನು ಕೊಲೆ ಮಾಡಿದ್ದು ದೇಶಕ್ಕೇ ಆದ ಅಪಮಾನ. ತನಿಖೆಗೆ ನಿರ್ಲಕ್ಷ್ಯ ಬೇಡ ತಕ್ಷಣ ಕಾನೂನು ಕ್ರಮವಾಗಲಿ ಎಂದು ಆಗ್ರಹಿಸಿದರು.
ಪ್ರಗತಿಪರ ಸಾಹಿತ್ಯ ಸಂಘಟಕ ರಾಮಾ ನಾಯ್ಕ ಹಂತಕರ ಬಂಧಿಸುವಲ್ಲಿ ಸರಕಾರ ಸೋತಿದೆ. ಆ ಹತ್ಯಾಕೋರರು ಬಲವಾದ ಮುಷ್ಟಿಯಲ್ಲಿ ರಕ್ಷಿಸಲ್ಪಡುತ್ತಿದ್ದಾರೆ. ದೇಶದಲ್ಲಿ ಭಯೋತ್ಪಾದನೆ ಎಂದರೆ ಬೇರೆಡೆಗೆ ಬೊಟ್ಟು ಮಾಡಿ ತೋರಬೇಕಿಲ್ಲ. ಭಾರತದ ಅಂತರಂಗದೊಳಗೆ ಧಾರ್ಮಿಕ ಭಯೋತ್ಪಾದಕ ಜನರು ಇದ್ದಾರೆ. ಅಂದರೆ ನಾವೇನು ಪುಕ್ಕಲರಾಗಿ ಹೆದರಿ ಕೂತು ಧರ್ಮಾಂಧರಿಗೆ ಸೋಲುವುದಿಲ್ಲ ಎಂದರು.
ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಕಿರಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ಎನ್.ಎಲ್ ಕಾರ್ಮಿಕ ಸಂಘಟನೆ ಕಾರ್ಯದರ್ಶಿ ಎಂ.ಎಂ.ಹೆಗಡೆ, ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ದಲಿತ ಸಂಘಟನೆಯ ಮುಂದಾಳು ಶ್ಯಾಮ ಸುಂದರ, ಸಿಐಟಿಯು ಮುಖಂಡರಾದ ಗೀತಾ ರಾಯ್ಕರ್, ಶುಷ್ಮಾ ಗುರವ್, ಮಾಯಾ ಕಾಣೇಕರ್ ತಾರಾ ನಾಯ್ಕ ಜಯಶ್ರೀ ಉಪಸ್ಥಿತರಿದ್ದರು.
ಭಾರತ ವಿದ್ಯಾರ್ಥಿ ಪೆಡರೇಷನ್ ಎಸ್.ಎಫ್.ಐ ಜಿಲ್ಲಾ ಸಂಚಾಲಕ ಗಣೇಶ್ ರಾಠೋಡ್ ಪ್ರಾಸ್ತಾವಿಕ ಮಾತನಾಡಿದರು. ವಿಮಲಾ ಪ್ರಭು ಸ್ವಾಗತಿಸಿದರು. ಸಿಐಟಿಯು ತಾ. ಕಾರ್ಯದರ್ಶಿ ಮಂಜುಳಾ ವಂದಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: ಉಳಿದಿದ್ದೆಲ್ಲ ಕಾಲ್ಮಡಿ ಎಂದು ಹೇಳಿದ ಕಲಬುರಗಿ ಯವರ ಬದುಕು, ಎಸ್.ಎಫ್.ಐ ಮತ್ತು ಸಮಾನ, ಚಿಂತನ ಉತ್ತರ ಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ, ಡಾ. ಎಂ.ಎಂ ಕಲ್ಬುರ್ಗಿ, ನಿರ್ಮಲ ಮನಸ್ಸೇ ಮಡಿ, ನೂರಾರು ಸಂಶೋಧನಾ ಪ್ರಬಂಧ, ವಿದ್ವತ್ ವಲಯಕ್ಕೆ ಆಘಾತಕಾರಿ, ಶ್ರೀಧರ ನಾಯಕ ಹತ್ಯೆ, ಸಹಸ್ರಾರು ವಿಚಾರ ಪ್ರಚೋದಕ ಭಾಷಣ, ಸಿಐಟಿಯು, ಹಂತಕರನ್ನು ಬಂಧಿಸುವಲ್ಲಿ ವಿಳಂಬ, ಹತ್ಯೆ ಮಾಡಿ ನಾಪತ್ತೆಯಾದ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,176 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar