ಕಾರವಾರ:
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಕಾರವಾರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಗಾ, ಪುನರ್ವಸತಿ ಕೇಂದ್ರ ಮುದಗಾ-2, ಕುರ್ನಿಪೇಟ-2 ಕೋಠಾರ, ಬರ್ನವಾಡಾ, ಲಿಂಗನಾಯ್ಕವಾಡಾ, ಬೈತಕೋಲ್-1 ಮತ್ತು ಜೋಶಿವಾಡ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸೆಪ್ಟಂಬರ್ 25 ರೊಳಗೆ ಕಾರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಇರಿಸಿದ ಸೀಲ್ ಮಾಡಿದ ಟೆಂಡರ್ ಬಾಕ್ಸಿನಲ್ಲಿ ಹಾಕತಕ್ಕದ್ದು. ಅರ್ಜಿ ಜೊತೆಯಲ್ಲಿ ಅವಶ್ಯಕ ಎಲ್ಲಾ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾರವಾರ ಇವರು ಕೋರಿದ್ದಾರೆ.
Leave a Comment