ಕಾರವಾರ: ಕುಮಟಾ ಉಪ ವಿಭಾಗದ ರಾಷ್ಟ್ರೀಯ ಹೆದ್ದಾರಿ-66(17) ರ ಚಥುಷ್ಟತ ಭೂಸ್ವಾಧೀನ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಪ್ರ.ದ.ಸ/ಕಂದಾಯ ನಿರೀಕ್ಷಕರ 3 ಹುದ್ದೆಗಳು ಹಾಗೂ ಭೂ ಮಾಪಕರ 2 ಹುದ್ದೆಗಳಿಗೆ ವಯೋ ನಿವೃತ್ತಿ ಹೊಂದಿ9ದ ದೈಹಿಕ ಹಾಗೂ ಮಾನಸಿಕ ಸಾಮರ್ಥವುಳ್ಳ ಸ್ವ-ಇಚ್ಚೆಯಿಂದ ಕಾರ್ಯ ನಿರ್ವಹಿಸಲು ಒಪ್ಪಿಗೆ ಇರುವ ಕಂದಾಯ ಇಲಾಖೆಯ ನಿವೃತ್ತ ಪ್ರ.ದ.ಸ/ಕಂದಾಯ ನಿರೀಕ್ಷಕ/ಭೂ ಮಾಪಕರನ್ನು ಸಂಚಿತ ವೇತನದ ಅನ್ವಯ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ 8 ಕೊನೆಯ ದಿನವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಪೂರ್ತಿ ಹೆಸರು, ವಿಳಾಸ, ನಿವೃತ್ತಿ ಹೊಂದಿದ ದಿನಾಂಕ, ನಿವೃತ್ತಿ ಪೂರ್ವ ಹೊಂದಿರುವ ಸೇವಾ ಮಾಹಿತಿ, ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಒಪ್ಪಿಗೆ ಪತ್ರ, ಹಾಗೂ ಸರ್ಕಾರಿ ಸೇವೆ(ಪ್ರ.ದ.ಸ/ಕಂದಾಯ ನಿರೀಕ್ಷಕರ/ಭೂ ಮಾಪಕ)ಯಿಂದ ನಿವೃತ್ತಿ ಹೊಂದಿರುವ ಕುರಿತು ಅಧಿಕೃತ ದಾಖಲೆ ಸಹಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯು ಕೇವಲ ತಾತ್ಕಾಲಿಕವಾಗಿದ್ದು, ಅಭ್ಯರ್ಥಿಯ ಆಯ್ಕೆ ಅಧಿಕಾರವು ಸಕ್ಷಮ ಪ್ರಾಧಿಕಾರಿಗಳು ರಾ.ಹೆ.66(17) ಹಾಗೂ ಕುಮಟಾ ಉಪ ವಿಭಾಗದ ಸಹಾಯಕ ಆಯುಕ್ತರ ವಿವೇಚನಾ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
Leave a Comment