ಕಾರವಾರ:
ಸಂಸ್ಕøತ ಭಾರತಿ, ತರುಣೋದಯ ಸಂಸ್ಕøತ ಸೇವಾ ಸಂಸ್ಥೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ 27ನೇ ರಾಷ್ಟ್ರಮಟ್ಟದ ಸಂಸ್ಕøತ ಭಾಷಣ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಪಾಠಶಾಲೆಯ ವಿದ್ಯಾರ್ಥಿ ಲಕ್ಷ್ಮೀಶ ಹೆಗಡೆ ತೃತೀಯ ಸ್ಥಾನಗಳಿಸಿ ಸಾಧನೆ ಗೈದಿದ್ದಾರೆ.
ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖವಾಗಿರುವ ಯುದ್ಧಪರಿಕರಗಳು ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ನಾನಾಭಾಗಗಳಿಂದ ಮಾತ್ರವಲ್ಲದೆ, ಹೊರರಾಜ್ಯಗಳ ಅಭ್ಯರ್ಥಿಗಳೂ ಪಾಲ್ಗೊಂಡಿದ್ದರು. ಶ್ರೀಮಾತಾ ಸಂಸ್ಕøತ ವಿದ್ಯಾಲಯದಲ್ಲಿ ವಿದ್ವಾನ್ ಮಧ್ಯಮ ತರಗತಿ ಅಭ್ಯಸಿಸುತ್ತಿರುವ ಲಕ್ಷ್ಮೀಶ್ ಹೆಗಡೆ ಭಾಗವಹಿಸಿ ಈ ಸ್ಥಾನ ಪಡೆದಿದ್ದಾರೆ. ಅವರು ಸಿದ್ದಾಪುರ ತಾಲೂಕಿನ ಭೀಮನಳ್ಳಿಯ ಮಂಜುನಾಥ ಹೆಗಡೆ ಮತ್ತು ಯಮುನಾ ಹೆಗಡೆ ದಂಪತಿಗಳ ಪುತ್ರರಾಗಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ಅನೇಕ ಗಣ್ಯರು ಅಭಿನಂದಿಸಿದ್ದಾರೆ.
This was state level competition as my knowledge