ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬೆಂಗಳೂರು, ಇವರ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರವು ಸೆ. 07 ಮತ್ತು 08ನೇ ಸಪ್ಟೆಂಬರ್ 2017ರಂದು ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ಕುಮಟಾದ ಡಾ. ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದೆ.
ಸಮಾಜ ವಿಜ್ಞಾನ ಪಠ್ಯಕ್ರಮದ ಸಮಸ್ಯೆಗಳನ್ನು ಚರ್ಚಿಸಿ ಅದರಲ್ಲಿ ಪರಿಹಾರ ಕಂಡುಹಿಡಿಯುವುದು ಈ ತರಬೇತಿಯ ಉದ್ದೇಶವಾಗಿದೆ. ಈ ಕಾರ್ಯಾಗಾರದಲ್ಲಿ ಭೂಗೋಲ ವಿಜ್ಞಾನದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದ ಪ್ರಾಂಶುಪಾಲರಾದ ಎಸ್.ಜಿ.ರಾಯ್ಕರ್, ಭೌಗೋಳಿಕ ಅಧ್ಯಯನ ಸಂಸ್ಥೆ, ಬೆಂಗಳೂರಿನ ಸ್ಥಾಪಕ ಮತ್ತು ನಿರ್ದೇಶಕರಾದ ಭೂಗೋಳಶಾಸ್ತ್ರಜ್ಞ ಡಾ. ಚಂದ್ರಶೇಖರ ಬಾಲಚಂದ್ರನ್, ಜಿಲ್ಲಾ ಎನ್ಆರ್ಡಿಎಮ್ಎಸ್ ಕೇಂದ್ರದ ಅನಿ¯ ನಾಯ್ಕ ಆಗಮಿಸಿ ಶಿಕ್ಷಕರಿಗೆ ಮಾಹಿತಿ ನೀಡಲಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ ಸೆ.7 ರಂದು ಬೆಳಿಗ್ಗೆ 10ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಕೆ.ಪ್ರಕಾಶ ನೆರವೇರಿಸುವರು. ನಿಯೋಜಿತ ಎಲ್ಲಾ ಶಿಕ್ಷಕರು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಹಾಜರಿದ್ದು ಈ ಕಾರ್ಯಾಗಾರದ ಲಾಭ ಪಡೆಯಬೇಕಾಗಿ ಸಂಘಟಕರ ಪರವಾಗಿ ಡಾ. ವಿ.ಎನ್.ನಾಯಕ ಕೋರಿದ್ದಾರೆ.
Leave a Comment