ಹೊನ್ನಾವರ: ಸ್ಫರ್ಧಾತ್ಮಕ ಯುಗದಲ್ಲಿ ಅಕ್ಷರ ಕಲಿಯದೇ ಇದ್ದವ ಇದ್ದಾರೆಂದರೆ ಅದು ಸಾಕ್ಷರರಾದ ನಮ್ಮೆಲ್ಲರ ಕರ್ತವ್ಯಲೋಪ ಪ್ರತಿ ವ್ಯಕ್ತಿ ಸಾಕ್ಷರರಾಗಬೇಕು. ತನ್ನ ಕುಟುಂಬದ ಆಗು-ಹೋಗುಗಳ ಬಗ್ಗೆ ಅರಿವಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿ ಎಂದು ಹೊನ್ನಾವರ ತಾಲೂಕಾ ಪಂಚಾಯತ್ ಅಧ್ಯಕ್ಷ ಉಲ್ಲಾಸ ನಾಯ್ಕ . ಅವರು ತಾ.ಪಂ.ಸಭಾಭವನದಲ್ಲಿ ನಡೆದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ತಾ.ಪಂ.ಸದಸ್ಯ ಅಣ್ಣಯ್ಯ ನಾಯ್ಕ ಮಾತನಾಡಿ ಹಿಂದೆ ಸರಕಾರವೇ ನಿಂತು ಸಾಕ್ಷರ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನ ಪಟ್ಟಿತು. ಆದರೆ ಇಂದು ಸ್ವಯಂಪ್ರೇರಿತರಾಗಿ ಸಾಕ್ಷರರಾಗಬೇಕಾದ ಅನಿವಾರ್ಯತೆ ಬಂದಿದೆ ಎಂದುರು,
ಸಮಾರಂಭದಲ್ಲಿ ತಾ.ಪಂ.ಸದಸ್ಯರು ಲಕ್ಷ್ಮೀ ಗೊಂಡ, ಮೀರಾ ತಾಂಡೇಲ್, ಕಮಲಾ ಹಳ್ಳೇರ ಹಾಗೂ ಚಂದ್ರಶೇಖರ ಗೌಡ ಉಪಸ್ಥಿತರಿದ್ದರು.
ಪ್ರಭಾರೆ ಕಾರ್ಯನಿರ್ವಾಹಕ ಅಧಿಕಾರಿ ಎಂ. ವಿ. ಹೆಗಡೆ ದಿನಾಚರಣೆಯ ಮಹತ್ವವನ್ನು ಸಭೆಗೆ ತಿಳಿಸಿದರು. À ಸ್ವಯಂ ಸೇವಕರಿಗೆ ಸಂಘ ಸಂಸ್ಥೆಯ ಪ್ರತಿನಿಧಿಗಳಿಗೆ ಹೊನ್ನಾವರ ತಾಲೂಕಿನ ಸಾಕ್ಷರತಾ ಸಂಯೋಜಕ ಸಾಧನಾ ಬರ್ಗಿ ದಿನಾಚರಣೆಯ ಮತ್ತು ಕರ್ತವ್ಯದ ಕುರಿತು ಪ್ರಮಾಣ ವಚನ ಬೋದಿಸುವುದರ ,. ಸಭೆಯ ಪ್ರಾರಂಭದಲ್ಲಿ ನ್ಯೂ ಇಂಗ್ಲೀಷ್ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರಿಂದ ನಾಡಗೀತೆ, ರೈತಗೀತೆಯನ್ನುಹಾಡಿದರು,
. ಸುರೇಶ ನಾಯ್ಕ, ಸಹಾಯ ನಿರ್ದೇಶಕರು ಅಕ್ಷರದಾಸೋಹ ಸ್ವಾಗತಿಸಿದರು. ಸಭೆಯಲ್ಲಿ ಸಾಕ್ಷರಗೀತೆಯನ್ನು ಕುಮಾರಿ ಸವಿತಾ ಗೌಡ ಹಾಡಿದರು. ಸಭೆಯ ನಿರ್ವಹಣೆಯನ್ನು ಯುವಜನ ಸೇವಾ ಕ್ರೀಡಾಧಿಕಾರಿಗಳಾದ ಸುಧೀಶ ನಾಯ್ಕ ನೇರವೇರಿಸಿದರು.
Leave a Comment