ಕಾರವಾರ: ಹಳಗಾದ ಮಾಡರ್ನ್ ಇಂಗ್ಲೀಷ ಸ್ಕೂಲ್ನಲ್ಲಿ ಲಾಯನ್ಸ್ ಕ್ಲಬ್ ವತಿಯಿಂದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಪಲಕರಣೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಸತಿ ಶಾಲಾ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು 2 ಕ್ವಿಂಟಲ್ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಯಿತು. ಲಾ. ಅನಿರುದ್ಧ ಹಳದೀಪುರಕರ, ಎಂ.ಜೆ.ಎಫ್. ಲಾ. ಇಬ್ರಾಹಿಂ ಕಲ್ಲೂರ, ಲಾ. ಅಲ್ತಾಫ್ ಶೇಖ್ ಅಕ್ಕಿಯನ್ನು ಉಚಿತವಾಗಿ ನಿಡಿದರು. ಎಂ.ಜೆ.ಎಫ್. ಲಾ. ಪಿ.ವಿ.ಪ್ರಾಜೀತ್ ನೀಡಿದ 2 ಕಂಪ್ಯೂಟರ ಹಾಗೂ ಪ್ರಿಂಟರ್ಗಳನ್ನು ಕ್ಲಬ್ ಪರವಾಗಿ ಸ್ಕೂಲಿಗೆ ನಿಡಲಾಯಿತು. ಲಾ. ವಿನೋದ ನಾಯ್ಕ ಉಪ್ಪಿನಕಾಯಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಮಾಜಿಲ ಕಾರ್ಯಕರ್ತ ಮಾಧವ ನಾಯಕ ಪಾಲ್ಗೊಂಡಿದ್ದರು. ನಿವೃತ್ತ ಶಿಕ್ಷಕ ಉಲ್ಲಾಸ ಪ್ರಭು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಕೂಲ್ ಅಧ್ಯಕ್ಷ ದಿಗಂಬರ ಶೇಟ್, ಲಾಯನ್ ಝೋನ್ ಚೇರಮನ್ ಶಶಿನಂದ ಮಾಸೂರಕರ್, ಕ್ಲಬ್ ಕೋಶಾಧಿಕಾರಿ ಐಶ್ವರ್ಯ ಮಾಸೂರಕರ ಮಾಜಿ ಅಧ್ಯಕ್ಷ ಹನೀಫ್ ಮುಲ್ಲಾ ಮುಂತಾದವರು ಇದ್ದರು.
Leave a Comment