ಕಾರವಾರ: ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ ಮಹಿಳಾ ಪಾರಂಪರಿಕ ಮೀನು ಒಣಗಿಸುವವರ ಹಾಗೂ ಮೀನು ಮಾರಾಟಗಾರರ ಸಂಘದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದ ಖಾರ್ವಿವಾಡದಲ್ಲಿ ವಾಸಿಸುತ್ತಿರುವ ಮೀನುಗಾರರು ಪುರಾತನ ಕಾಲದಿಂದಲೂ ಮೀನು ಒಣಗಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಇದನ್ನೇ ವೃತ್ತಿಯನ್ನಾಗಿಸಿಕೊಂಡ ಮೀನುಗಾರ ಮಹಿಳೆಯರಿಗೆ ಬೇರೆ ಉದ್ಯೋಗ ತಿಳಿದಿಲ್ಲ. ಹಿಂದಿನಿಂದಲೂ ಸಾಗರ ಮತ್ಸ್ಯಾಲಯದ ಹಿಂಭಾಗ ಮೀನು ಒಣಗಿಸುತ್ತಿರುವ ತಮ್ಮನ್ನು ಆಗಾಗ ಸರ್ಕಾರ ಒಕ್ಕಲೆಬ್ಬಿಸುತ್ತಿದ್ದು, ಇದನ್ನು ತಡೆಯಬೇಕು. ಮೀನುಗಾರಿಕೆಯನ್ನು ನಂಬಿ ಮಕ್ಕಳ ಶಿಕ್ಷಣ ಹಾಗೂ ಜೀವನ ನಿರ್ವಹಣೆ ಮಾಡುತ್ತಿರುವ ನಾವು ಸಂಘವನ್ನು ರಚಿಸಿಕೊಂಡಿದ್ದು, ಮೀನು ಒಣಗಿಸಲು ಶಾಶ್ವತ ಜಾಗ ಅವಷ್ಯಕತೆ ಇದೆ. ಹೀಗಾಗಿ ಸಮುದ್ರ ದಂಡೆಯ ಸಾಗರ ಮತ್ಸ್ಯಾಲಯ ಹಿಂಭಾಗ ಸಂಘದ ಹೆಸರಿಗೆ 5 ಎಕರೆ ಜಾಗ ಮಂಜೂರಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
Leave a Comment