ಹೊನ್ನಾವರ : ತಾಲೂಕಿನ ಹೊಸಾಕುಳಿ ಗ್ರಾಮದ ಸಂತೆಗುಳಿ ಲಕ್ಷಿನಾರಾಯಣ ದೇವಸ್ದಾನದಿಂದ ಭಾಸ್ಕೇರಿ-ಆರೋಳ್ಳಿ 3.55ಕಿ.ಮಿ ಉದ್ದದ ರಸ್ತೆ ಸುಧಾರಣಾ ಕಾಮಗಾರಿಗೆ 329.70 ಲಕ್ಷ ವೆಚ್ಚದ ರಸ್ತೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಶಾಸಕಿ ಶಾರದಾ ಶೆಟ್ಟಿ ನೇರವೇರಿಸಿದರು.ನಂತರ ಮಾತನಾಡಿದ ಅವರು ಕಳೆದ 20 ವರ್ಷದಿಂದ ಡಾಂಬರಿಕರಣ ಕಾಣದ ಈ ರಸ್ತೆಯ ಅಭಿವೃದ್ದಿಗಾಗಿ ಇ ಭಾಗದ ಜನರು ಮನವಿ ನೀಡಿದ್ದರು.ಈ ರಸ್ತೆ ಅಭಿವೃದ್ದಿಗೆ 3.29.70 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ನಮ್ಮ ಗ್ರಾಮ ನಮ್ಮ ರಸ್ತೆಯೊಜನೆಯಡಿ ಕೈಗೊಳ್ಳಲಾಗಿದೆ. ಇದರಲ್ಲಿ 1.25 ಕಿಮೀ ಕಾಂಕ್ರೀಟ್ ರಸ್ತೆ 2.30ಕಿಮೀ ಡಾಂಬರ ರಸ್ತೆ ಒಳಗೊಂಡಿದ್ದು ಈ ರಸ್ತೆ ಅಭವೃದ್ದಿಯಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ.ರಾಜ್ಯಹೆದ್ದಾರಿ 114ರಿಂದ ರಾಷ್ಟೀಯ ಹೆದ್ದಾರಿ 206ಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇದರಿಂದ ಸುತ್ತಲಿನ ಗ್ರಾಮದವರಿಗೂ ಅನುಕೂಲಕರವಾಗಲಿದೆ. 5ವರ್ಷಗಳ ಕಾಲ ಗುತ್ತಿಗೆದಾದರು ರಸ್ತೆ ನಿರ್ವಹಣೆ ಒಳಗೊಂಡಿದೆ. ಈ ಭಾಗದ ಇನ್ನು ಕೆಲವು ರಸ್ತೆಗಳ ಅಭಿವೃದ್ದಿಗಳಿಗೆ ಗ್ರಾಮಸ್ಥರು ಮನವಿ ನೀಡಿದ್ದಾರೆ ಅದನ್ನು ಕೈಗೊಳ್ಳಾಗುದು ಎಂದರು.
ಹೊಸಾಕುಳಿ ಗ್ರಾಮ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ ಮತನಾಡಿ ಶಾಸಕಿ ಶಾರದಾ ಶೆಟ್ಟಯವರು ನಮಗೆ ಈ ಹಿಂದೆ ನೀಡಿದ ಭರವಸೆಯಂತೆ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಇನ್ನುಳಿದ ಹದಗೆಟ್ಟ ರಸ್ತೆಯನ್ನು ಸುಧಾರಿಸಲು ಮನವಿ ನೀಡಿದರು.ರಸ್ತೆ ಕುರಿತು ಕಾರ್ಯನಿರ್ವಾಹಕ ಅಭಿಯಂತರ ಆರ್.ಜಿ.ಭಟ್ಟ್ ನಮ್ಮ ಗ್ರಾಮ ನಮ್ಮ ರಸ್ತೆ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಸ್ಥಳೀಯರಾದ ಗಣೇಶ ಹೆಗಡೆ ರಸ್ತೆ ಅಭಿವೃದ್ದಿಗೆ ಸಹಕರಿಸಿದ ಶಾಸಕರನ್ನು ಅಭಿನಂದಿಸಿ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಲಲಿತಾನಾಯ್ಕ, ಪಂಚಾಯತ ಉಪಾಧ್ಯಕ್ಷೆ ಮಹಾಲಕ್ಷ್ಮೀ ನಾಯ್ಕ, ಗುತ್ತಿಗೆದಾರ ಗಣೇಶ ನಾಯ್ಕ, ಪಂಚಾಯತ್ ಸದಸ್ಯ ತಿಮ್ಮಣ ಹೆಗಡೆ, ಉಪಸ್ದಿತರಿದ್ದರು. ಪರಮೇಶ್ವರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
Leave a Comment