ಕಾರವಾರ: ಅಂಕೋಲಾ ತಾಲೂಕಿನ ಗುಳ್ಳಾಪುರದಲ್ಲಿರುವ ಬ್ಯಾಂಕ್ ವ್ಯವಸ್ಥಾಪಕ ಚಂದ್ರು ಶಿವರಾಂ ಭಟ್ಟ ಹಾಗೂ ಕುಟುಂಬದವರ ಮೇಲೆ 13 ಜನರ ತಂಡವೊಂದು ಹಲ್ಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸಿ ಹಲ್ಲೆಗೊಳಗಾದವರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಸಂಘ ಆಗ್ರಹಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಶಿವರಾಂ ಗಾಂವ್ಕರ್ ಕನಕನಳ್ಳಿ, ಬೈಕಿನ ಸಾಲ ಪಡೆದು ಹಣ ತುಂಬದೇ ಇರುವ ಕುರಿತು ವಿಚಾರಿಸಿದ ಕಾರಣಕ್ಕಾಗಿ ಸಂದೀಪ್ ಅಶೋಕ ನಾಯ್ಕ ಎಂಬಾತ 13 ಜನರ ತಂಡದೊಂದಿಗೆ ಆಗಮಿಸಿ ಹಲ್ಲೆ ನಡೆಸಿದ್ದು, ಪೊಲೀಸರು 5 ಆರೋಪಿಗಳನ್ನು ಮಾತ್ರ ಬಂಧಿಸಿದ್ದಾರೆ. ವಾರ ಕಳೆದರೂ ಪ್ರಕರಣದ ಮೂಲ ಆರೋಪಿಗಳ ಬಂಧನವಾಗಿಲ್ಲ. ಕೂಡಲೇ ಇತರೆ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೂಲತ ರೈತ ಕುಟುಂಬದ ಚಂದ್ರು ಭಟ್ಟ ಹಾಗೂ ಅವರ ಕುಟುಂಬದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ವಾರದ ಒಳಗೆ ಬಂಧಿಸದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ದರಣಿ ನಡೆಸುವದಾಗಿ ಎಚ್ಚರಿಸಿದ್ದಾರೆ.
Leave a Comment