• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ;ಎಸ್.ಎಸ್. ನಕುಲ್ ಅವರಿಗೆ ಮನವಿ

September 15, 2017 by Sachin Hegde Leave a Comment

ಕಾರವಾರ:

ಬಾಡ ಗ್ರಾಮದ ಸರ್ವೆ ನಂ.268ರ ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಇಲ್ಲಿನ ಸ್ಥಳೀಯರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಪದ್ಮನಾಭ ನಗರ, ಗುರುಮಠ, ಕೆನರಾ ಬ್ಯಾಂಕ್ ಕಾಲೋನಿ ಹಾಗೂ ಮಹಾದೇವನಗರದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಿದ್ದು 3 ಸಾವಿರದಷ್ಟು ಜನಸಂಖ್ಯೆ ಇದೆ. ಇಲ್ಲಿನ ನಿವಾಸಿಗಳೆಲ್ಲರೂ ದಿನನಿತ್ಯದ ಉಪಯೋಗಕ್ಕಾಗಿ ನಗರಸಭಾ ಸಾರ್ವಜನಿಕ ಕಾಂಕ್ರೀಟ್ ರಸ್ತೆಯನ್ನು ಅವಲಂಭಿಸಿದ್ದಾರೆ. ಆದರೆ ಶನೀಶ್ವರ ದೇವಸ್ಥಾನದ ಹತ್ತಿರ ಈ ರಸ್ತೆಗೆ ಸಂಪರ್ಕ ಸಾಧಿಸಲು ಸಾಧ್ಯವಿರದೇ ಇರುವ ಕಾರಣ ರಸ್ತೆಯು ಅಪೂರ್ಣವಾಗಿದೆ. ಕೆನರಾ ಬ್ಯಾಂಕ್ ಕಾಲೋನಿಯಿಂದ ಹಾಗೂ ಮಹಾದೇವಸ್ಥಾನ ಎದುರಿನಿಂದ ಹೋಗುವ ರಸ್ತೆಗೆ ಮಧ್ಯದಲ್ಲಿ ಸರಕಾರಕ್ಕೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಿಸದೆ ಖುಲ್ಲಾ ಇಡಲಾಗಿದೆ. ಆದ್ದರಿಂದ ಎರಡೂ ಬದಿಗಳಲ್ಲಿನ ರಸ್ತೆಯನ್ನು ಸಂಪರ್ಕಿಸಲು ಸುಮಾರು 120ಮೀ ಅಂತರ ಹಾಗೇ ಇದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು ಕೇಳಿದರೆ ಇದು ಸರಕಾರಿ ಜಮೀನು ಆಗಿರುವುದರಿಂದ ಸಾರ್ವಜನಿಕ ಸಂಪರ್ಕ ರಸ್ತೆ ನಿರ್ಮಿಸಲು ತಮ್ಮಿಂದ ಅಸಾಧ್ಯ ಎಂದು ಅಸಹಾಯಕತೆಯನ್ನು ತೋರ್ಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಸರಕಾರಕ್ಕೆ ಸೇರಿದ ಈ ಜಾಗದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಆಗದೇ ಇರುವುದರಿಂದ ಇಲ್ಲಿನ ನಿವಾಸಿಗಳಾದ ತಮಗೆ ಅನೇಕ ತೊಂದರೆಗಳು ಉಂಟಾಗುತ್ತಿವೆ. ದಿನ ನಿತ್ಯವೂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸೇರಿದಂತೆ ಎಲ್ಲರಿಗೂ ಸಂಚರಿಸಲು ಕಷ್ಟವಾಗಿ ತೊಂದರೆ ಅನುಭವಿಸುತ್ತಿದ್ದೇವೆ. ಅಲ್ಲದೇ ಖುಲ್ಲಾ ಇರುವ ಈ ಸರಕಾರಿ ಜಮೀನಿಗೆ ಸಂಪರ್ಕ ರಸ್ತೆ ಇಲ್ಲದಿರುವ ಕಾರಣ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಮಳೆಗಾಲದಲ್ಲಿ ನೀರು ತುಂಬಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಅಧಿಕಾರಿಗಳನ್ನು ಸ್ಥಳ ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಬೇಕು ಹಾಗೂ ಸದ್ರಿ ಸ್ಥಳದಲ್ಲಿ ಸಂಪರ್ಕ ರಸ್ತೆಗೆ ಅತೀ ಅವಶ್ಯವಿರುವ ಜಾಗವನ್ನು ಸರಕಾರದ ಸ್ವಾಧೀನದಲ್ಲಿರುವ ಬಾಡ-1 ಗ್ರಾಮದ ಜಮೀನು ಸರ್ವೆ ನಂ.268 ಹಿಸ್ಸಾ 1+2/1 ಕ್ಷೇತ್ರ 0-2-0 ಹಾಗೂ ಸರ್ವೆ ನಂ.268 ಹಿಸ್ಸಾ1+2/3 ಕ್ಷೇತ್ರ 0-20-14ನೇದರಲ್ಲಿ ಅವಶ್ಯವಿರುವ ಜಾಗವನ್ನು ಮಂಜೂರಿ ಮಾಡಿ ನಗರಸಭೆಗೆ ಸೂಕ್ತ ನಿರ್ದೇಶನ ನೀಡಿ ರಸ್ತೆ ನಿರ್ಮಾಣ ಮಾಡಿ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಅರ್ಚಕ ರಾಮಕೃಷ್ಣ ಗಣೇಶ ಗಾಯತ್ರಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಸತೀಶ ಕೋಳಂಬಕರ, ಸಿದ್ಧಾರ್ಥ ನಾಯಕ ಮುಂತಾದವರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: 120ಮೀ ಅಂತರ, ಅವಕಾಶ ನೀಡುವಂತೆ ಒತ್ತಾಯಿಸಿ, ಈ, ಎಸ್.ಎಸ್. ನಕುಲ್ ಅವರಿಗೆ ಮನವಿ, ಕೆನರಾ ಬ್ಯಾಂಕ್ ಕಾಲೋನಿ, ಗುರುಮಠ, ದಿನ ನಿತ್ಯವೂ, ಪದ್ಮನಾಭ ನಗರ, ಬಾಡ ಗ್ರಾಮದ ಸರ್ವೆ ನಂ.268, ರಸ್ತೆ ನಿರ್ಮಾಣಕ್ಕೆ, ರಸ್ತೆಗೆ ಸಂಪರ್ಕ, ವಿದ್ಯಾರ್ಥಿಗಳಿಗೆ, ಶನೀಶ್ವರ ದೇವಸ್ಥಾನ, ಶಾಲಾ-ಕಾಲೇಜು, ಸಾಧಿಸಲು ಸಾಧ್ಯವಿರ, ಹತ್ತಿರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,032 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar