ಕುಮಟಾ: ಬರ್ಗಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂದಿನ ಮೋಕೇಸ್ತರು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ಐದು ಪ್ರಕರಣಗಳ ಪೈಕಿ ಮೂರು ಪ್ರಕರಣಗಳನ್ನು ನ್ಯಾಯಾಲಯ ವಜಾ ಮಾಡಿದೆ.
ಮಹಾಲಿಂಗೇಶ್ವರ ದೇವಸ್ಥಾನವೂ ಮುಜರಾಯಿ ಇಲಾಖೆಗೆ ಸೇರಿದ್ದಾಗಿದ್ದು, 2018ರ ಸೆಪ್ಟೆಂಬರ್ 8ರಂದು ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರು ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಿದ್ದರು. 2017ರ ಅಗಷ್ಟ್ 22 ರಂದು ಪುನ: ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಹಿಂದಿನ ಅವದಿಯಲ್ಲಿ ಗೋಳಿ ಬೀರದೇವರ ಅನ್ ಎಕೌಂಟೆಡ್ ಆಭರಣ ಹಾಗೂ ಇತರ ಸಾಮಗ್ರಿಗಳನ್ನು ವಾದಿಯ ತಾಬಾ ಒಪ್ಪಿಸುವಂತೆ, ಐ.ಜೆ.ಕೆ.ಎಲ್ ನೆಲಗಟ್ಟಿನ ಮೇಲೆ ಕಟ್ಟುತ್ತಿರುವ ಯಜಮಾನ ದೇವಸ್ಥಾನ ಕಟ್ಟಡ ಕಟ್ಟದಂತೆ ಶಾಶ್ವತ ತಡೆಯಾಜ್ಞೆ ನೀಡುವಂತೆ ಹಾಗೂ ಬೀರದೇವತಾ ಟ್ರಸ್ಟ್ ಡೀಡ್ ರದ್ದು ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನಂತರಾಜ ಎಸ್ ಹಂದೆ, ಬಿ.ಎಸ್ ದೇಸಾಯಿ, ನಾರಾಯಣ ಪಟಗಾರ, ವಿನಾಯಕ ಗುನಗಾ ಎಂಬಾತರನ್ನು ಒಳಗೊಂಡು ಒಟ್ಟು 11 ಜನರ ವಿರುದ್ದ ದೂರಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಾದಿಯೂ ನ್ಯಾಯಸಮ್ಮತ ಪರಿಹಾರ ಕೋರಿ ದಾವೆ ಸಲ್ಲಿಸಬೇಕಾದರೆ ಆತನೂ ನ್ಯಾಯಯುತವಾಗಿರಬೇಕು ಎಂದು ಉಲ್ಲೆಖಿಸಿದೆ. ಆರೋಪಗಳನ್ನು ರುಜುವಾತು ಪಡಿಸಲು ಸಾದ್ಯವಾಗದೇ ವಿಫಲವಾಗಿರುವದರಿಂದ ದಾವೆಯನ್ನು ಖರ್ಚು ಸಹಿತ ವಜಾಗೊಳಿಸಿದೆ. ದೇವಸ್ಥಾನದ ಪರವಾಗಿ ಬಿ.ಡಿ ಶ್ರೀನಾಥ್ ವಾದ ಮಂಡಿಸಿದ್ದರು ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಅನಂತರಾಜು ಎಸ್ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment