ಕಾರವಾರ: ಮತದಾರರ ಪಟ್ಟಿಯಲ್ಲಿ ಹೆಸರು ಸೆರ್ಪಡೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮತದಾರರ ಹೆಸರನ್ನು ಕಡಿಮೆ ಮಾಡುವ ಕುರಿತು ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಮತದಾರರು ಸೆಪ್ಟಂಬರ 23 ರೊಳಗಾಗಿ ಸಂಬಂಧಿಸಿದ ಮತಗಟ್ಟಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರುಗಳು ನೊಂದಾವಣಿಯಾಗಿರುವ ಬಗ್ಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳು/ತಹಶೀಲ್ದಾರರ ಕಛೆರಿಗಳಿಗೆ ಸಂಪರ್ಕಿಸಿ ಮತದಾರರ ಪಟ್ಟಿಗಳನ್ನು ಪರಿಶೀಲಿಸಿಕೊಂಡು, ಒಂದಕ್ಕಿಂತ ಹೆಚ್ಚಿನ ಮತಗಟ್ಟೆಗಳಲ್ಲಿ ಹೆಸರುಗಳು ನೋಂದಾವಣೆಯಾಗಿದ್ದಲ್ಲಿ ಅಂತಹ ಹೆಚ್ಚುವರಿ ನೋಂದಾವಣಿಗಳನ್ನು ನಿಗದಿತ ನಮೂನೆ-7 ಭರ್ತಿ ಮಾಡಿಕೊಟ್ಟು ರದ್ದು ಪಡಿಸಿಕೊಳ್ಳಬೇಕು.
ಮತಗಟ್ಟೆ ಅಧಿಕಾರಿಗಳಿಗೆ ಸೂಚನೆಗಳು : ಮತಗಟ್ಟೆ ಮಟ್ಟದ ಅಧಿಕಾರಿ(ಬಿ.ಎಲ್.ಒ) ಅಂತ ಕಾರ್ಯನಿರ್ವಹಿಸುತ್ತಿರುವರು ಸೆಪ್ಟಂಬರ 28 ರೊಳಗಾಗಿ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ನೀಡಿ ಮರಣ ಹೊಂದಿದ, ಮದುವೆ ಇನ್ನಿತರೇ ಕಾರಣಗಳಿಂದ ಬೇರೆ ಕಡೆಗೆ ಹೋಗಿರುವಂತಹ ಮತದಾರರನ್ನು ಗುರುತಿಸಿ, ಇದನ್ನು ಸಮರ್ಥಿಸುವ ಮರಣ ದಾಖಲೆ ಹಾಗೂ ಇತರೆ ದಾಖಲೆಗಳನ್ನು ನಿಗದಿತ ನಮೂನೆಗಳಲ್ಲಿ ಮಾಹಿತಿಯನ್ನು ಸಂಬಂಧಿತರಿಂದ ಪಡೆದು ಅಂತಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಡಿಮೆ ಮಾಡಲು ಕ್ರಮ ಜರುಗಿಸತಕ್ಕದ್ದು, ಹಾಗೂ ಈ ಬಗ್ಗೆ ಅಕ್ಟೋಬರ 3 ರಂದು ಕಡಿಮೆ ಮಾಡಿದ ಮತದಾರರ ವಿವರಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment