ಕಾರವಾರ: ಕಂದಾಯ ಇಲಾಖೆ ಕಚೇರಿಗಳಲ್ಲಿ ಸಾರ್ವಜನಿಕರೊಂದಿಗಿನ ಸ್ಪಂಧನೆ, ಕಡತ ವಿಲೇವಾರಿ, ಸ್ವಚ್ಛತೆ ಸೇರಿದಂತೆ ಇನ್ನಿತರ ವಿಷಯಗಳನ್ನಿಟ್ಟುಕೊಂಡು ಜಿಲ್ಲಾಧಿಕಾರಿ ಏರ್ಪಡಿಸಿದ್ದ ಸ್ಫರ್ಧೆಯಲ್ಲಿ ಅಂಕೋಲಾ ತಹಶೀಲ್ದಾರ್ ಕಚೇರಿಮೊದಲ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯ ಎಲ್ಲ ಉಪ ವಿಭಾಗಾಕಾರಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಆ. 21ರಿಂದ 23 ರವರೆಗೆ ಸ್ವಚ್ಛತೆ ಹಾಗೂ ಇತರ ವಿಷಯಗಳ ಪರಿಶೀಲನೆ ನಡೆಸಲಾಗಿದೆ. ಅದರಂತೆ ಅಂಕೋಲಾದ ತಹಶೀಲ್ದಾರ್ ಕಚೇರಿಯು ಸ್ಪರ್ಧೆಯಲ್ಲಿ ಒಟ್ಟು 220 ಅಂಕಗಳಿಗೆ 147 ಅಂಕ ಪಡೆದು ಮೊದಲ ಸ್ಥಾನ ಪಡೆದಿದೆ. ಇನ್ನುಳಿದಂತೆ 146 ಅಂಕ ಗಳಿಸಿರುವ ಶಿರಸಿ ತಹಶೀಲ್ದಾರ್ ಕಚೇರಿ ಸ್ಪರ್ಧೆಯಲ್ಲಿ ಎರಡನೇ ಹಾಗೂ 143 ಅಂಕ ಗಳಿಸಿದ ಹಳಿಯಾಳ ತಹಶೀಲ್ದಾರ ಕಚೇರಿ ಮೂರನೇ ಬಹುಮಾನ ಪಡೆದವು. 109 ಅಂಕ ಪಡೆದ ಭಟ್ಕಳ ತಹಶೀಲ್ದಾರ ಕಚೇರಿ ಕೊನೇಯ ಸ್ಥಾನ ಗಳಿಸಿದೆ.
ಕಚೇರಿಯ ಆವರಣದ ಸ್ವಚ್ಛತೆ, ಕಚೇರಿಯ ಒಳಭಾಗ ಮತ್ತು ಕಾರೀಡಾರ್ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ, ವಿಷಯ ನಿರ್ವಾಹಕರ ಕ್ಯಾಬಿನ್ ಕುಳಿತುಕೊಳ್ಳುವ ಸ್ಥಳದ ಸುತ್ತಲಿನ ಸ್ವಚ್ಛತೆ, ಕಡತಗಳ ವಿಲೇವಾರಿ, ನಿರುಪಯುಕ್ತ ವಸ್ತುಗಳ ವಿಲೇವಾರಿ ಸೇರಿದಂತೆ ಒಟ್ಟು 22 ವಿಷಯಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಒಂದೊಂದು ವಿಷಯಕ್ಕೆ ತಲಾ 10 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಪೆÇ್ರಬೇಷನರಿ ಐಎಎಸ್ ಅಧಿಕಾರಿ ಕೆ. ಆನಂದ ಹಾಗೂ ಶಿರಸಿ, ಕುಮಟಾ, ಕಾರವಾರ ಮತ್ತು ಭಟ್ಕಳ ಉಪ ವಿಭಾಗಾಧಿಕಾರಿಗಳು ಸ್ವಚ್ಛತೆಯ ಪರಿಶೀಲನೆ ನಡಸಿ ಅಂಕವನ್ನು ನೀಡಿದ್ದಾರೆ.
ಈಲ್ಲೆಯ ಇತರ ಉಪವಿಭಾಗಾಧಿಕಾರಿ ಕಚೇರಿಗಳ ಪೈಕಿ ಕಾರವಾರ 138, ಕುಮಟಾ 133, ಭಟ್ಕಳ 123 ಹಾಗೂ ಶಿರಸಿ 120 ಅಂಕಗಳನ್ನು ಪಡೆದಿವೆ. ತಹಶೀಲ್ದಾರ್ ಕಚೇರಿಗಳ ಪೈಕಿ ಕಾರವಾರ 131, ಕುಮಟಾ 128, ಹೊನ್ನಾವರ 129, ಸಿದ್ದಾಪುರ 139, ಯಲ್ಲಾಪುರ 127, ಮುಂಡಗೋಡ 128 ಹಾಗೂ ಜೋಯಿಡಾ 126 ಅಂಕ ಪಡೆದಿವೆ.
Leave a Comment