ಕಾರವಾರ:
ಆಧಾರ್ ನೋಂದಣಿ ಅದಾಲತ್ ನಗರಸಭೆ ಸಭಾಂಗಣದಲ್ಲಿ ಸೆಪ್ಟೆಂಬರ್ 21ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಇ-ಆಡಳಿತ ಬೆಂಗಳೂರು ಹಾಗೂ ಜಿಲ್ಲಾಡಳಿತ ಕಾರವಾರ ಸಹಯೋಗದೊಂದಿಗೆ ಆಧಾರ್ ನೋಂದಣಿ ಅದಾಲತ್ ನಡೆಯುತ್ತಿದ್ದು ಈ ಹಿಂದೆ ಆಧಾರ್ ವಿಷಯದಲ್ಲಿ ಆಗಿರುವ ದೋಷಗಳನ್ನು ಸರಿಪಡಿಸುವುದು ಹಾಗೂ ವಿವಿಧ ಕಾರಣಗಳಿಂದ ಈವರೆಗೆ ಆಧಾರ್ ನೋಂದಣಿ ಮಾಡಿಸದಿದ್ದವರು ಈ ಆದಾಲತ್ನಲ್ಲಿ ನೋಂದಣಿ ಮಾಡಿಸಬಹುದು ಎಂದರು. ಈ ಹಿಂದೆ ಆಧಾರ್ ನೋಂದಣಿ ಮಾಡಿಸಿ ತಾಂತ್ರಿಕ ಕಾರಣಗಳಿಂದ ಆಧಾರ್ ಸಿಗದಿದ್ದವರೂ ಮತ್ತೊಮ್ಮೆ ಆಧಾರ್ ನೋಂದಣಿ ಮಾಡಿಸಬೇಕು ಅಲ್ಲದೆ, ಮೊಬೈಲ್ ಲಿಂಕ್, ವಿಳಾಸ ಬದಲಾವಣೆ, ಹೆಸರಿನಲ್ಲಿನ ದೋಷಗಳ ತಿದ್ದುಪಡಿ, ವಯಸ್ಸು ಮತ್ತು ಹುಟ್ಟಿದ ದಿನಾಂಕದ ತಿದ್ದುಪಡಿಗಳ ಅವಶ್ಯವಿದ್ದಲ್ಲೂ ಅದಾಲತ್ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕಿದೆÉ ಎಂದರು.
ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲೂ ಆಧಾರ್ ನೋಂದಣಿ ಅದಾಲತ್ ನಡೆಯಲಿದ್ದು ಪ್ರತಿ ತಾಲೂಕಿನಲ್ಲಿ 10 ದಿನಗಳ ಕಾಲ ನಾಲ್ಕು ಕಿಟ್ಗಳ ಮೂಲಕ ನಿರಂತರ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ಎಲ್ಲರಿಗೂ ಆಧಾರ್ ಸೌಲಭ್ಯ ಒದಗಿಸುವುದು ಇದರ ಮುಖ್ಯ ಉದ್ದೇಶ ಎಂದರು. ವಿಶೇಷವಾಗಿ ಕಾರವಾರ ನಗರ ವ್ಯಾಪ್ತಿಯಲ್ಲಿ ವಯೋವೃದ್ಧರು, ವಿಕಲಾಂಗತೆಯಿಂದ ಆಧಾರ್ ನೋಂದಣಿಗೆ ಆಗಮಿಸದೆ ಬಿಟ್ಟು ಹೋಗಿರುವವರು ಹಾಗೂ ಹಾಸಿಗೆ ಹಿಡಿದಿರುವವರಿಗಾಗಿ ಸಹಾಯವಾಣಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಕರೆ ಬಂದಲ್ಲಿ ಅವರ ಮನೆಗೇ ತೆರಳಿ ಆಧಾರ್ ನೋಂದಣಿ ಮಾಡಿಸಲಾಗುವುದು. ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ 08382 229857 ಹಾಗೂ 1077 ನಂಬರಿಗೆ ಕರೆ ಮಾಡಿ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
Leave a Comment