• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರ್ಥಿಕವಾಗಿ ಸದೃಢರಾಗುವ ಮೂಲಕ ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ಸಾಗಿಸಿರಿ

September 24, 2017 by Sachin Hegde Leave a Comment

ಹಳಿಯಾಳ: ಅಂಗವಿಕಲರಿಗೆ ಅನುಕಂಪ ತೊರಿಸಿದೆ ಅವರಲ್ಲಿರುವ ಪ್ರತಿಭೆಗಳನ್ನು ಬೆಳಗಿಸಲು ಅವಕಾಶ ಮಾಡಿಕೊಟ್ಟರೇ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ನುಡಿದರು.
ಪಟ್ಟಣದ ಕೆನರಾ ಬ್ಯಾಂಕ ದೇಶಪಾಂಡೆ ಆರ್‍ಸೆಟಿ ಸಂಸ್ಥೆಯ ಆವರಣದಲ್ಲಿ ವಿ.ಆರ್.ಡಿ.ಎಮ್ ಟ್ರಸ್ಟ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿಮಗೆ ಕೊಡಲಾಗುವ ಸಾಧನೆ-ಸಲಕರಣೆಗಳ ಸರಿಯಾದ ಉಪಯೋಗ ಮಾಡಿಕೊಂಡು. ಆರ್ಥಿಕವಾಗಿ ಸದೃಢರಾಗುವ ಮೂಲಕ ಯಾರನ್ನು ಅವಲಂಬಿಸದೆ ಸ್ವತಂತ್ರವಾಗಿ ಜೀವನ ಸಾಗಿಸಿರಿ ಎಂದು ಸಚಿವರು ಕರೆ ನೀಡಿದರು.
ಕ್ಷೇತ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳ ಮೂಲಕ ಅಭಿವೃದ್ಧಿ ಕೈಗೊಳ್ಳಲಾಗಿದ್ದು ಜಿಲ್ಲೆಯಾದ್ಯಾಂತ ಕಾಂಗ್ರೇಸ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದರು.
ಟಿ.ವಿ.ಎಸ್ ಮೋಟಾರ ಕಂಪನಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ ವೇಣು ಮಾತನಾಡಿ ಸಚಿವರ ಸದೂದ್ದೇಶದಿಂದ ನಾನು ಪ್ರಭಾವಿತನಾಗಿದ್ದೇನೆ ಅವರ ಇಚ್ಛೆಯಂತೆ ನಮ್ಮ ಕಂಪನಿ ಅಂಗವೀಕಲರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಂತ್ರಪ್ತಿಯಾಗಿದೆ ಎಂದ ಅವರು ಸಚಿವರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದ ನಮ್ಮ ಕಂಪನಿ ಪ್ರತಿ ವರ್ಷ 2 ಮಿಲಿಯನ್ ಮೋಟಾರ ವಾಹನಗಳ ಉತ್ಪಾದನೆಯನ್ನು ಮಾಡುತ್ತಿದೆ ಎಂದರು.
ಸಚಿವರು ಟಿ.ವಿ.ಎಸ್ ಮೋಟಾರ ಕಂಪನಿ ಲಿಮಿಟೆಡ್ ಬೆಂಗಳೂರು ವತಿಯಿಂದ 60 ತ್ರಿ-ಚಕ್ರ ವಾಹನ ಸೀತಾರಾಮ ಜಿಂದಾಲ್ ಪೌಂಡೆಸನ್ ಬೆಂಗಳೂರು 20 ಮತ್ತು ಜೈ ಶಿವಶಕ್ತಿ ಆ್ಯಂಡ್ ಎಜ್ಯುಕೇಶನ್ ಪೌಂಡೇಷನ್ ಬೆಂಗಳೂರಿನ ವತಿಯಿಂದ 3, ಹ್ಯಾವ ಎ ಹಾರ್ಟ ಪೌಂಡೇಷನ್ ತ್ರಿ-ಚಕ್ರ ವಾಹನ 3 ಹೀಗೆ ಒಟ್ಟೂ 86 ತ್ರಿ-ಚಕ್ರ ವಾಹನ, ದಿವ್ಯಾಂಗರಿಗೆ ಶ್ರವಣ ಸಾಧನ 125, ಬಡ ಪ್ರತಿಭಾವಂತ ವಿದ್ಯಾರ್ಥಿಯರಿಗೆ ತಲಾ 10 ಸಾವಿರ ಶಿಷ್ಯ ವೇತನ, ಆರ್.ಸೆಟಿ ಸಂಸ್ಥೆಯಲ್ಲಿ ವಾಹನ ರಿಪೇರಿ ತರಭೇತಿ ಪಡೆದ ವಿದ್ಯಾರ್ಥಿಗಳಿಗೆ ಭಾಶ್ ಕಂಪನಿಯ ಟೊಲ್ಸ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಟಿ.ಎಸ್ ಮೋಟಾರ ಕಂಪನಿಯ ಕಾರ್ಪೊರೇಟ್ ರಿಲೇಶನ್ ವಿಭಾಗ ಉಪಾಧ್ಯಕ್ಷ ವಿ.ಆರ್ ಕರುನಾಕರ ರೆಡ್ಡಿ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಲಕ್ಷ್ಮೀ ಕೊರ್ವೆಕರ, ರಮೇಶ ನಾಯ್ಕ, ತಾಪಂ ಅಧ್ಯಕ್ಷ ರೀಟಾ ಸಿದ್ದಿ, ಉಪಾಧ್ಯಕ್ಷ ನೀಲವ್ವಾ ಮಡಿವಾಳ ಬ್ಲಾಕ ಕಾಂಗ್ರೇಸ ಅಧ್ಯಕ್ಷ ಸುಭಾಸ ಕೊರ್ವೆಕರ ಇದ್ದರು.
ವಿ.ಆರ್.ಡಿ.ಎಮ್ ಟ್ರಸ್ಟ ಸದಸ್ಯ ಕಾರ್ಯದರ್ಶಿ ಶ್ಯಾಮ ಕಾಮತ ಸ್ವಾಗತಿಸಿದರು, ಶ್ರೀಧರ ಬೂಮಣ್ಣವರ ಮತ್ತು ನೆಲ್ಸಿ ಫರ್ನಾಡಿಸ್ ನಿರೂಪಿಸಿದರು, ಆರ್‍ಸೆÉಟಿ ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ ವಂದಿಸಿರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 2 ಮಿಲಿಯನ್ ಮೋಟಾರ ವಾಹನ, 60 ತ್ರಿ-ಚಕ್ರ ವಾಹನ ಸೀತಾರಾಮ ಜಿಂದಾಲ್ ಪೌಂಡೆಸನ್ ಬೆಂಗಳೂರು 20 ಮತ್ತು ಜೈ ಶಿವಶಕ್ತಿ ಆ್ಯಂಡ್ ಎಜ್ಯುಕೇಶನ್ ಪೌಂಡೇಷನ್ ಬೆಂಗಳೂರಿನ ವತಿಯಿಂದ 3, ಅಂಗವಿಕಲರಿಗೆ ಅನುಕಂಪ ತೊರಿಸಿದೆ, ಅವಲಂಬಿಸದೆ, ಆರ್ಥಿಕವಾಗಿ ಸದೃಢರಾಗುವ, ಕೆನರಾ ಬ್ಯಾಂಕ, ಟಿ.ವಿ.ಎಸ್ ಮೋಟಾರ ಕಂಪನಿ, ದೇಶಪಾಂಡೆ ಆರ್‍ಸೆಟಿ ಸಂಸ್ಥೆ, ಪ್ರತಿಭೆಗಳನ್ನು ಬೆಳಗಿಸಲು ಅವಕಾಶ, ಮೂಲಕ, ಯಾರನ್ನು, ಯೋಜನೆಗಳ ಮೂಲಕ ಅಭಿವೃದ್ಧಿ, ಸಾಗಿಸಿರಿ, ಸಾಧನೆ-ಸಲಕರಣೆ, ಸ್ವತಂತ್ರವಾಗಿ ಜೀವನ, ಹ್ಯಾವ ಎ ಹಾರ್ಟ ಪೌಂಡೇಷನ್ ತ್ರಿ-ಚಕ್ರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar