ಹೊನ್ನಾವರ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಡೆಸುತ್ತಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಅವರು ಸಂಪೂರ್ಣ ಗುಣಮುಖರಾಗಲಿ ಎಂದು ತಾಲೂಕಿನ ಜೆಡಿಎಸ್ ಮುಖಂಡರು ಹಾಗೂ ಅಭಿಮಾನಿಗಳು ತಾಲೂಕಿನ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಿ ಎನ್ ಗೌಡ, ಮಂಕಿ ಬ್ಲಾಕ್ ಅಧ್ಯಕ್ಷ ರಾಜು ನಾಯ್ಕ, ಮುಖಂಡರಾದ ಮನು ನಾಯ್ಕ ಮಂಕಿ, ರವಿ ಶೆಟ್ಟಿ, ಯುವ ಪ್ರಧಾನ ಕಾರ್ಯದರ್ಶಿ ಲಂಬೋದರ ಗೌಡ, ನರಸಿಂಹ ನಾಯ್ಕ, ಅಜಿತ ತಾಂಡೇಲ್, ಮಂಜುನಾಥ ಗೌಡ, ಶಂಕರ ಗೌಡ ಇತರರಿದ್ದರು.
Leave a Comment