ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಡಾ. ಬಿ.ಬಿ. ಮೂಡಬಾಗಿಲ ದವಾಖಾನೆ ಹತ್ತಿರ ಪ್ರತಿ ವರ್ಷದಂತೆ ಈ ವರ್ಷ 13 ನೇ ನವರಾತ್ರಿ ಉತ್ಸವವನ್ನು ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಸೆಪ್ಟಂಬರ್ 21 ರಿಂದ ಪ್ರಾರಂಭವಾಗಿರುವ ನವರಾತ್ರಿ ಉತ್ಸವ ಕಾರ್ಯಕ್ರಮ ದಿ.30 ರವರೆಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀ ನಾಗನಾಥ ಸಂಯುಕ್ತ ಯುವರಂಗದ ಅಧ್ಯಕ್ಷ ಅರುಣಕಾಶಿನಾಥ ನಾಯ್ಕ ತಿಳಿಸಿದ್ದಾರೆ.
ತಾಲೂಕಿನ ಮಂಗಳವಾಡ ಗ್ರಾಮದ ನಿವೃತ್ತ ಶಿಕ್ಷಕ ಆರ್.ವಿ.ಅಷ್ಟೇಕರ ರವರಿಂದ ನಿರ್ಮಿಸಲಾದ ಶ್ರೀ ದುರ್ಗಾದೇವಿ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ದಿ.25 ರಿಂದ 27 ರವರೆಗೆ ಲಲಿತಾ ಪಂಚಮಿ ದಿ27 ಅಶ್ವೀಜ ಶುದ್ಧ ಸಪ್ತಮಿ ತನಕ ಪ್ರತಿದಿನ ನವಗ್ರಹಜಪ, ಸಪ್ತಶತಿ ಪಾರಾಯಣ, ಮಾಲಾಧಾರಣ, ಶ್ರೀ ದೇವರಿಗೆ ರುದ್ರಾಭಿಷೇಕ, ಅಲಂಕಾರ ನೈವೇದ್ಯಾರತಿ.ಪ್ರಸಾದ.
ದಿ.28 ಅಶ್ವೀಜ ಶುದ್ಧ ಅಷ್ಟಮಿ, ನಿತ್ಯಪೂಜೆ, ಮುಂಜಾನೆ 11 ಘಂಟೆಗೆ ಪ್ರಾರ್ಥನೆ, ಗಣೇಶ ಪೂಜನ, ಪುಣ್ಯಾಹವಾಚನ, ದೇವನಾಂದಿ, ನವಗ್ರಹ ಜಪಾ, ರುದ್ರಾಭಿಷೇಕ, ಅಲಂಕಾರ, ನವಗ್ರಹ ಸಹಿತ ಶ್ರೀ ದುರ್ಗಾಹವನ ನಡೆಯಲಿದ್ದು ಮದ್ಯಾಹ್ನ 1.30 ಘೋಟೆಗೆ ಪೂರ್ಣಾವತಿ, ಆರತಿ ನೈವೆದ್ಯ, ಪ್ರಸಾದ ವಿತರಣೆ, 29 ರಂದು ಮಂಗಳÀವಾರ ಅಶ್ವಿಜ ಶುದ್ಧ ನವಮಿ ನವರಾತ್ರಿ ಉತ್ಥಾಪನ, ನವಮಿಪೂಜೆ ಇತ್ಯಾದಿ ದಿ.30 ಬುಧವಾರ ವಿಜಯದಶಮಿ ಕಾರ್ಯಕ್ರಮ ಆರತಿ ನೈವೆದ್ಯ, ಪ್ರಸಾದ ವಿತರಣೆ ನಂತರ ಮೂರ್ತಿ ವಿಸರ್ಜನೆ ನಡೆಯಲಿದೆ.
ಉತ್ಸವ ಮಂಡಳಿಯ ಗೌರವಾಧ್ಯಕ್ಷರಾದ ಡಾ. ಬಿ.ಬಿ. ಮೂಡಬಾಗಿಲ, ಕಾರ್ಯದರ್ಶಿ ಮಹೇಶ ಪಿ. ನಾಯ್ಕ, ಸಂತೋಷ ವಿಷ್ಣು ಘಟಕಾಂಬಳೆ, ದೇವಿದಾಸ ನಾಯ್ಕ, ವಿಲಾಸ ಕಣಗಲಿ, ಯೋಗೆಶ ಮರಾಠೆ, ಆಶೀಶ ರವೀಂದ್ರ ಭೋಜ, ದೇಮಾಣಿ ವಾಡಕರ, ಅಚ್ಚುತನ ಗೋಪಾಲನ, ಈರಣ್ಣಾ ಸಿಂಗ್, ಕಿರಣ ಶೆಟವಣ್ಣವರ, ಈಶ್ವರ ಕಣವಿ ಮೊದಲಾದವರು ಉತ್ಸವದ ನಿರ್ವಹಣೆ ಮಾಡುತ್ತಿದ್ದಾರೆ.
Leave a Comment